ಈ ಹೃದಯದ ಮಿಡಿತವುಮೌನ ಕವಿತೆಯಾಗಿ ಹೊರಬರಲು.....
ನನ್ನಲಿ ಅಡಗಿರುವ ಪ್ರೀತಿಯು
ಮಕರಂದವಾಗಿ ಹೊಮ್ಮುತಿರಲು.....
ಚಂದಿರ ಚೆಲ್ಲಿದ ಬೆಳದಿಂಗಳಲಿ
ನಿನ್ನ ನೆನಪುಗಳು ಕಮಲವಾಗಿ ಅರಳುತಿರಲು.....
ರೋಮಾಂಚನಗೊಂಡ ಈ ಮನಸಿನ
ಒಡನಾಟಕೆ ನೀ ಜೊತೆಯಿರಲು.....
ನಿನ್ನ ಪ್ರೀತಿಯ ಲೋಕದಲ್ಲಿ ಮರೆಯಾದೆ ನಾನು
ನನ್ನೆದೆಯ ಅರಮನೆಗೆ ರಾಣಿಯಾಗಿ ಉಳಿದೆ ನೀನು....
Happy Valentines Day..............:-)








