Sunday, February 28, 2010

प्यार होगया है ..


प्यार होगया था हमे उनसे
उनकी खूबसूरत चेहरा से
उनकी काली काली जुल्फों से
उनकी झील सी आँखों से ॥


प्यार होगया था हमे उनसे
उनकी मीठी आवाज़ से
उनकी हस्ते हुए होठों से
उनकी हर अदाओं से ॥


प्यार करते करते ही रह गए,
जब उनको बताना चाह
तो चले गए थे वो
हमे अकेला छोडके ॥


अब प्यार हो गया है हमे
उनकी हर यादों से
उनके साथ बीते हुए
हर एक लम्हों से ॥

Sunday, February 14, 2010

ಹೃದಯ ಮಿಡಿತ

ಈ ಹೃದಯದ ಮಿಡಿತವು
ಮೌನ ಕವಿತೆಯಾಗಿ ಹೊರಬರಲು.....

ನನ್ನಲಿ ಅಡಗಿರುವ ಪ್ರೀತಿಯು
ಮಕರಂದವಾಗಿ ಹೊಮ್ಮುತಿರಲು.....

ಚಂದಿರ ಚೆಲ್ಲಿದ ಬೆಳದಿಂಗಳಲಿ
ನಿನ್ನ ನೆನಪುಗಳು ಕಮಲವಾಗಿ ಅರಳುತಿರಲು.....

ರೋಮಾಂಚನಗೊಂಡ ಈ ಮನಸಿನ
ಒಡನಾಟಕೆ ನೀ ಜೊತೆಯಿರಲು.....

ನಿನ್ನ ಪ್ರೀತಿಯ ಲೋಕದಲ್ಲಿ ಮರೆಯಾದೆ ನಾನು
ನನ್ನೆದೆಯ ಅರಮನೆಗೆ ರಾಣಿಯಾಗಿ ಉಳಿದೆ ನೀನು....


Happy Valentines Day..............:-)
ಮನಸು ಮೌನವಾಗಿದೆ
ಮಾತು ಮರೆತುಹೋಗಿದೆ.....
ನಿನ್ನ ಸುಂದರ ನೆನಪುಗಳಲ್ಲಿ
ಮನಸು ಮುಳುಗಿ ಹೋಗಿದೆ.....

ಕಣ್ಣುಗಳು ನಿನ್ನ ನೋಡಲು
ಕಂಬನಿಯಲ್ಲಿ ನಿನಗಾಗಿ ಕಾದಿದೆ.....
ಉಸಿರು ನಿನ್ನ ಹೆಸರು ಕೂಗಲು
ಉಸಿರು ಹಿಡಿದಿಟ್ಟು ಕಾದಿದೆ.....

ನಿನ್ನ ಕನಸನ್ನು ಕಾಣುವ ಕಣ್ಣಿಗೆ
ಕಂಬನಿಯನ್ನೇಕೆ ನೀ ಕೊಟ್ಟೆ.....?
ನಿನ್ನನೆ ಪ್ರೀತಿಸಿದ ಈ ಹೃದಯಕೆ
ನೋವನ್ನೇಕೆ ನೀ ಇಟ್ಟೆ.....?

ಒಮ್ಮೆಯಾದರೂ ನೀ ಬರುವೆ ಎಂದು
ಸಣ್ಣ ಆಸೆಯೊಂದು ಮೂಡಿದೆ.....
ಆ ಆಸೆಗೆ ಜೀವ ತುಂಬಿ
ಮನಸು ಹೃದಯ ನಿನಗಾಗಿ ಕಾದಿದೆ.....

Sunday, February 7, 2010

ನಿನ್ನ ಸನಿಹ


ನನ್ನ ಸನಿಹ ನೀನು ಬರಲು
ನನ್ನ ಮಾತು ಮೌನವಾಯಿತು,
ನಿನ್ನ ಕಣ್ಣ ನೋಡುತಿರಲು
ನನ್ನ ಕಲ್ಪನೆಯೇ ಕರಗಿಹೋಯಿತು.....

ನಿನ್ನ ನಗುವ ಕಂಡ ಕ್ಷಣವು
ನನ್ನ ಮನವು ನಿನ್ನದಾಯಿತು,
ನಿನ್ನ ಅಂದ ಹೊಗಳಲು ಚಂದ
ಪದಗಳೇಕೋ ಸಾಲದೇ ಹೋಯಿತು.....

ಒಂದು ಬಾರಿ ನನ್ನ ಸೇರಿ
ಹೃದಯ ಮಿಡಿತವ ಕೇಳು ಬಾರೆ,
ನನ್ನ ಮೌನ ಗೀತೆಯಲ್ಲಿ
ಪದಗಳಾಗಿ ಬೆರೆಯ ಬಾರೆ.....

ಹೇಳು ನೀನು ಒಂದು ಮಾತು
ನೀನೆ ನನ್ನ ಪ್ರೀತಿಯೆಂದು,
ನನ್ನ ಹೃದಯ ಬರೆದುಕೊಟ್ಟು
ನಿನ್ನ ಸನಿಹ ಇರುವೆ ನಾ ಎಂದೆಂದೂ.....

Will be with you forever and ever and ever.....

Sunday, January 31, 2010

ನೆನಪು......


ನೆನಪಾಗುವುದು ನಿನ್ನ ಸವಿ ಸ್ಪರ್ಶ
ಈ ತಂಗಾಳಿ ಸೋಕಿದಾಗ.....
ನೆನಪಾಗುವುದು ನಿನ್ನ ಕಣ್ಣುಗಳು
ಆ ಚುಕ್ಕಿಗಳ ನಾ ನೋಡಿದಾಗ.....


ನೆನಪಾಗುವುದು ನಿನ್ನ ನಗುವು
ಅರಳುವ ಹೂವನ್ನು ನೋಡಿದಾಗ.....
ನೆನಪಾಗುವುದು ನಿನ್ನ ತುಂಟ ತನ
ಪುಟ್ಟ ಮಗುವನ್ನು ನೋಡಿದಾಗ.....

ನೆನಪಾಗುವದು ಆ ಕ್ಷಣಗಳು
ಪ್ರತಿಸಾರಿ ಈ ಹೃದಯ ಮಿಡಿದಾಗ.....
ಜೊತೆಯಾಗುವುದು ನಿನ್ನ ನೆನಪುಗಳು
ಒಂಟಿಯಾಗಿ ಜೀವನದಲ್ಲಿ ನಾ ಸಾಗುವಾಗ.....

Tuesday, December 29, 2009

जब भी ............

जब भी हम आपसे मिलते थे
न जाने क्यूँ दिल जोर से धड़कने लगता था
शायद उस दिल को कुछ कहना था आपसे
बेचारा शर्माता था ... !!


जब भी हम आपको देखते थे
जाने क्यूँ मेरे आँखों में रौशनी आती थी
शायद कुछ दिखाना चाहते थे ये आँखें,
बेचारे सपनो में खो जाते थे …॥


जब भी आप हमसे बात करते थे
जाने क्यूँ मेरे होंठ सुक जाते थे ,
शायद उसे कुछ लेना था आपसे
बेचारे चुप हो जाते थे …॥


जब भी हमे आपकी याद आती थी ,
हमे प्यार का एहसास होता था ,
कैसे कहूं में आपसे यह सब बातें
शायद आपको ही समज लेना था …॥


अगर आप भी हमे प्यार करते थे ,
तो , आप ही समज लेते ते इन धडकनों को
हमे पता है की आप भी महसूस कर रहे थे
पर देर क्यूँ है मुझसे ये बात कहने को …॥

Saturday, December 19, 2009

ಏನಾಗಲಿ ನಾನು.....?



ಕರಗುವ ಹನಿಯಾಗಿ ನಾನು
ನಿನ್ನೆದೆಯ ಚಿಪ್ಪಲ್ಲಿ ಮುತ್ತಾಗಲೇನು...?
ನೀ ನುಡಿಯುವ ಪದಗಳಾಗಿ ನಾನು
ನಿನ್ನ ಕೆಂಪಾದ ತುಟಿಗಳ ನಾ ತಾಕಲೇನು....?

ಮಿನುಗುವ ಬೆಳಕಾಗಿ ನಾನು
ನಿನ್ನ ಕಣ್ಣುಗಳಲ್ಲಿ ಸದಾ ಬೆಳಗಲೇನು...?
ನೀ ನಡೆದಾಗ ನನ್ನೆದೆ ಝಲ್ಲೆನಿಸುವ
ನಿನ್ನ ಕಾಲಿನ ಗೆಜ್ಜೆಯಾಗಲೇನು...?

ನೀನಿಡುವ ಸಿಂಧೂರವಾಗಿ ನಾನು
ನಿನ್ನ ಹಣೆಯ ಚುಂಬಿಸಲೇನು...?
ನಿನ್ನೊಲುಮೆಯ ಒಲವಾಗಿ ನಾನು
ನಿನ್ನ ಜೊತೆ ಚಿರಕಾಲ ಜೀವಿಸಲೇನು...?

ಏನಾಗಲಿ ನಾನು.....? ಏನಾಗಲಿ ನಾನು.....?

Sunday, December 6, 2009

Miss u.



ನನ್ನ ಜೀವನದಲ್ಲಿ ದೀಪವಾಗಿ ನೀ ಬಂದೆ ,
ಕತ್ತಲೆಯಲಿದ್ದ ನನಗೆ ಆನಂದವೆಂಬ ಬೆಳಕು ನೀ ತಂದೆ ,
ಆ ಬೆಳಕು ಸದಾ ಇರಲಿ ಎಂದುಕೊಂಡೆ
ಆದರೆ ನೀ ದೂರವಾದಂತೆ ಕನಸ್ಸಾಗಿ ಕಂಡೆ ,
ನನನ್ನು ಮತ್ತೆ ಕತ್ತಲಿಗೆ ತಂದೆ ,
ಏಕೆ ಎನಲು ನಾ ನಿನ್ನ ಮರೆತೆ ಎಂದೆ ………




ಆದರು ನೀ ನನ್ನ ಹೃದಯದಲ್ಲಿ ಉಳಿದುಕೊಂಡೆ
ನಿನ್ನ ಸನಿಹದಿಂದ ಜೀವನದಲ್ಲಿ ಅಲ್ಪಾನಂದ ಕಂಡೆ ,
ಆ ಕ್ಷಣ ಮರೆಯಾಗದಿರಲಿ ಎಂದು ದೇವರಲ್ಲಿ ಬೇಡುಕೊಂಡೆ,
ಅವನು ಆ ಆಸೆ ನೆರವೇರಿಸಲಿಲ್ಲ ಎಂದು ನೊಂದುಕೊಂಡೆ ,
ನೀನಿಲ್ಲದ ಜೀವನ ಏನು ಎಂದೆ ?................
ಹೃದಯ ಹೇಳಿತು ಅದು ನಿನ್ನ ಸವಿ ನೆನಪುಗಳೊಂದೆ……


I Miss U Every second of my life.......

Thursday, December 3, 2009

ಚಿಗುರೊಡೆಯಿತು....


ಮುಂಜಾನೆಯ ಮುಸುಗಿನಲ್ಲಿ
ಮೈ ಕೊರೆಯುವ ಚಳಿಯಂತೆ........
ಸೂರ್ಯನ ಎಳೆ ಬಿಸಿಲಿನಲ್ಲಿ
ಸುರಿಯುವ ಸೋನೆಯಂತೆ ........
ಬಾನಿನಂಚಲಿ ಮೂಡಿದ
ರಂಗಿನ ಚಿತ್ತಾರದಂತೆ .......
ಮಾಮರದಲಿ ಮೈ ಮರೆತು ಹಾಡುವ
ಗಾನ ಕೋಗಿಲೆಯ ಇಂಪಾದ ಹಾಡಿನಂತೆ......
ನಮ್ಮಿಬ್ಬರ ಪ್ರೀತಿ ಚಿಗುರೊಡೆಯಿತು
ಈ ನನ್ನ ಎದೆ ಚಿಪ್ಪಿನಲ್ಲಿ ಸ್ವಾತಿ ಮುತ್ತಾಗಿ ಉಳಿಯಿತು,
ಒಲವಿನ ಹೂವಾಗಿ ಅರಳಿತು.........

Sunday, November 8, 2009

तुझे प्यार देने के लिए
मैं नफरत भी सह सकता हूँ ......

तुझे रोशिनी देने के लिए
मैं अँधेरा में रह सकता हूँ .....

तेरी होटों पे हसी देखने के लिए
मैं ग़म भी सह सकता हूँ.....

मगर तुम तो मेरी दिल की धड़कन हो
कहो, मैं तेरे बिना कैसे जी सकता हूँ.......?