Wednesday, June 11, 2014

ತಂಗಾಳಿ,
ನಾ ನಿಲ್ಲಲ್ಲು ನಿನ್ನ ಎದುರಲಿ 
ಹಾದು ಹೋಗುವುದು ನೆನಪುಗಳು,
ನಿನ್ನ ಜೊತೆಯಲಿ

ಇದ್ದಿರಬಹುದು
ಅವಳ ಉಸಿರು ನಿನ್ನಲಿ
ಬೆರೆತಂತೆ ಭಾಸವಾಗಿದೆ
ಈ ಕ್ಷಣ, ನನ್ನುಸಿರಲಿ     

Wednesday, May 21, 2014

ಓ ಮನಸೇ,
ನಿಲ್ಲದ್ದಿರು ನನ್ನೆದುರು ಪ್ರಶ್ನೆಯಾಗಿ

ಹೆಕ್ಕಿ ತೆಗೆಯದಿರು,
ಆ ನೆನಪುಗಳ, ಒಂದೊಂದಾಗಿ 

ಮಂಜು ಕಟ್ಟಿದ ಕಣ್ಣಲಿ,
ಮೂಡುವಳು ಅವಳು ಬಿಂಬವಾಗಿ

ಆ ಬಿಂಬವು ಕರಗಿ,
ಇಳಿಜಾರುವುದು ಕಂಬನಿಯಾಗಿ

ಮೂಕಾದ ಹೃದಯ,
ತೊದಲುವುದು ಬಡಿತವಾಗಿ

ಓ ಮನಸೇ... 

ಬಿಟ್ಟುಬಿಡು ಎನ್ನ,
ಇದ್ದುಬಿಡುವೆ ನಿನ್ನಿಂದ ದೂರವಾಗಿ


ಕಾಡುತಿದೆ ಎನ್ನ,
ಹೀಗೊಂದು ಹೃದಯ 

ಪ್ರೀತಿಯನು ಚೆಲ್ಲಿ,
ಮರಳು ಮಾಡುವ ಸಮಯ 

ಅರಿಯದೆ ಮೂಡಿದ ಭೀತಿಯಲಿ,
ಅಡಗಿದೆ ಒಲವಿನ ವಿಸ್ಮಯ 

ಓ ಮನಸೇ... 

ದಾಟದಿರು ಪ್ರೀತಿಯ ಕಾಲುವೆಯ 
ಆಗದಿರು ಅವಳಲಿ, ನೀ ತನ್ಮಯ

ಇದ್ದುಬಿಡು ಹೇಗೇ...  

ಇರುವನು ನಿನ್ನ ಜೊತೆಯಲಿ
ಚಂದಿರನೆಂಬ ಗೆಳೆಯ

Friday, March 14, 2014

ಕೊನೆಯ ಸಾಲು

ಮುಗಿಯದ ಪ್ರೀತಿಯ ಕಾವ್ಯಕೆ,
ಕೊನೆಯ ಸಾಲೊಂದು ಬರೆಯಬೇಕಿದೆ.. 

ಹಾದು ಹೋಗು ಒಮ್ಮೆ,  ಓ ಹುಡುಗಿ 

ನಿನ್ನ ಗೆಜ್ಜೆಯ ಸದ್ದಲ್ಲಿ, 
ಆ ಪದಗಳು ಅಡಗಿದೆ   

Wednesday, January 29, 2014

ಅರಿಯದೆ ಮೂಡಿದ ಭಾವ, ಈ ಹನಿಗವನ

ನಿದಿರೆಗೂ ಗೊತ್ತಿರಲಿಲ್ಲ 
ತನ್ನ ಕನಸು ನೀನೆಂದು;
ಹೃದಯಕೂ ತಿಳಿದಿರಲಿಲ್ಲ 
ಆ ಮಿಡಿತ ನಿನದೆಂದು  

Tuesday, October 15, 2013

ಯಾರೋ..?



ಕಣ್ಣ ರೆಪ್ಪೆಯ ತೆರೆಯಮೇಲೆ
ನಿನ್ನ ಚಿತ್ರವ ಬಿಡಿಸಿದವರು ಯಾರೋ..?

ಕಣ್ಣು ಮುಚ್ಚಿದ ಪ್ರತಿ ಸಲ
ಎದುರಲಿ ನಿನ್ನ ನಿಲ್ಲಿಸುವವರು ಯಾರೋ..?


ಮನದ ಈ ತುಡಿತಕೆ,
ಮೌನದ ಭಾಷೆ ಕಲಿಸಿದವರು ಯಾರೋ..?

ಕೆನ್ನೆಯ ತೋಯಿಸುವ ಹನಿಗಳಿಗೆ
ನೆನಪುಗಳ ಪರಿಚಯ ಮಾಡಿಸಿದವರು ಯಾರೋ..?


ನನ್ನ ಇತಿಹಾಸದ ಪುಟದಲಿ,
ನಿನ್ನ ಮಂದಹಾಸವ ಸೇರಿಸಿದವರು ಯಾರೋ..?

ನಿನ್ನ ನುಡಿಮುತ್ತುಗಳ ಜೋಡಿಸಿ,
ಎದೆಯ ಚಿಪ್ಪಿನಲಿ ಕೂಡಿಟ್ಟವರು ಯಾರೋ..?


ಈ ಪ್ರೀತಿಯೆಂಬ ಮಾಯೆಗೆ,
ಕೊಲೆ ಮಾಡುವ ಕಲೆ, ಕಲಿಸಿದವರು ಯಾರೋ..?

ಹೃದಯದ ಮೂಲೆಯಲಿ ಅವಿಸಿಟ್ಟರು,
ಮತ್ತೆ ನಿನ್ನ ಹೆಕ್ಕಿ ತೆಗೆಯುವವರು ಯಾರೋ..?

Friday, August 16, 2013

ನಿಮ್ಮೊಲವೇ ಸಾಕ್ಷಿಯಾಗಲಿ...



ನನ್ನ ಮಾತಿಗೆ ನಿಮ್ಮ ಮೌನ ಜೊತೆಯಾಗಲಿ
ನನ್ನ ಹೃದಯಕೆ, ನಿಮ್ಮ ಮಿಡಿತ ಉಸಿರಾಗಲಿ
ಈ ಕಣ್ಣುಗಳಿಗೆ, ನಿಮ್ಮ ಕನಸು ಕೊಸರಾಗಲಿ
ಈ ಪ್ರೀತಿಗೆ, ನಿಮ್ಮ ನಗುವೇ ಸಮ್ಮತಿಯಾಗಲಿ
ನಮ್ಮಿಬ್ಬರ ಮಿಲನಕೆ, ನಿಮ್ಮೊಲವೇ ಸಾಕ್ಷಿಯಾಗಲಿ...     

Tuesday, August 6, 2013



ಮನಸೇಕೋ ಹಪಿಸಿದೆ ಇಂದು,
ಅವಳನ್ನು ಒಮ್ಮೆ ನೋಡಲೆಂದು.... 

ಕಾಡಿದೆ ಅರಿಯದ ಭಯವೊಂದು,
ನಿಲ್ಲುವುದೇನೋ ಈ ಹೃದಯ, ಆ ಕ್ಷಣವೆಂದು.... 

ಹೇಳಬೇಕಿದೆ ಅವಳಿಗೆ ಮಾತೊಂದು 
ಇಂದಿಗೂ ಈ ಹೃದಯಕೆ ಒಡತಿ, ತಾನೆಂದು... 

ಪಡೆಯಬೇಕಾಗಿದೆ ಅವಳ ಅಪ್ಪಣೆಯೊಂದು,
ಮಲಗಲು ತನ್ನ ಮಡಿಲಲಿ, ಕ್ಷಣವೊಂದು.... 

ನನ್ನ ಕೊನೆಯ ಆಸೆ ಪೂರೈಸಿದೆಯೆಂದು,
ಹೇಳುತ, ಕಣ್ಮರೆಯಾಗಬೆಕೆನಿಸಿದೆ ಇಂದು....           

ಋಝು



ನೆನಪುಗಳು ನನ್ನ ಕಾಡಿದಾಗ,
ಕಣ್ಣಿನ ಹನಿಗಳು ತನಂತಾನೆ ಜಾರಿದಾಗ,
ವಾಸ್ತವದ ಜೊತೆ ಮನಸು ಒಗ್ಗೂಡದಾಗ,
ಹೃದಯವು ತನ್ನವಳನು ಬಿಟ್ಟುಕೊಡದಾಗ,
ಉಂಟಾಗುವ ನೋವು, ನನ್ನ ಪ್ರೀತಿಗೆ 
ಋಝುವಾಗಿದೆ.......:(     

Thursday, May 16, 2013

ನನ್ನ ಪ್ರೀತಿ, ಸೇರಲಿ ನಿನ್ನಲಿ



ಬಣ್ಣದ ಪ್ರೀತಿಗೆ, ಮೌನವೆಂಬ ಮೋಡವು ಮುಸುಗಿದೆ 
ಗುಡುಗು ಮಿಂಚಾಗಿ ನಿನಗೆ ಕಾಣಲಿ,
ಕರಗಿ ಮಳೆಯಾಗಿ ಸುರಿಯಲಿ


ನಿನ್ನ ಮನದಲಿ,
ಇಬ್ಬನಿಯಾಗಿ ಸೇರಿ, ನೆನಪಾಗಿ ಕರಗಿದರು ಸರಿಯೇ 

ಅಥವಾ 
ನಿನ್ನೆದೆಯ ಚಿಪ್ಪಲಿ ಸೇರಿ, ಮುತ್ತಾಗಿ ಉಳಿದರು ಸರಿಯೇ 

ಏನೇ ಆಗಲಿ,
ಈ ನನ್ನ ಪ್ರೀತಿ, ಸೇರಲಿ ನಿನ್ನಲಿ 
ಇದ್ದುಬಿಡಲಿ,
ಕೊನೆಯ ಉಸಿರಲ್ಲೂ, ನಿನ್ನ ಜೊತೆಯಲಿ