Thursday, September 11, 2014

ಪ್ರೇಮಿಯೆಂಬ ಜಂಬ

ಮರಳಿದ ಮನಸೇ 
ನಿನ್ನ ಕನಸಿಗೆ, ಕೊಡಲಾರೆ 
ತುಸು ಜಾಗವ 

ಎಲ್ಲವು ಹೊತ್ತೋಯ್ದ ನೀನು 
ಬರಿ ಕನಸ ತಂದರೆ, ಕಟ್ಟಲಾರೆ 
ಪ್ರೀತಿ ಗೋಪುರವ

ಇನ್ನುಳಿದಿರುವುದು ನಾನು 
ಮತ್ತೆ ಅವಳ ನೆನಪು, ಮರಯಲಾರೆ 
ಅವಳು ಬಿಟ್ಟು ಹೋದ ಆ ಕ್ಷಣವ 

ಬದುಕಲು ತುಸು ಕಷ್ಟ 
ಆದರು ಪ್ರೇಮಿಯೆಂಬ ಜಂಬ, ಸಾಲದೇ 
ಬದುಕಲು ಈ ಜಂಬವ?

Wednesday, June 11, 2014

ಹೃದಯ ಬಿಚ್ಚಿ ಹೇಳುವ ಮುನ್ನ,
ನೀ ಏಕೆ, ದೂರ ಸರಿದೆ ನನ್ನ
ಉರುಳುವ ಕಾಲಕೆ ಎದುರಾಗಿ ನಿಂತು
ಕಾಯುತಿರುವೆ ನಾ, ಆ ಕ್ಷಣವನ್ನ    
ಒಂದೊಮ್ಮೆ ಯಾರೋ,
ಕೂಗಿದಂತೆ ನನ್ನ

ತಿರುಗು ನೋಡಿ
ಸುಮ್ಮನಾಗುವ ಮುನ್ನ

ಪಿಸುಗುಟ್ಟಿದೆ ಹೃದಯ,
ಅವಳ ಹೆಸರನ್ನ

ಓ ಪ್ರೀತಿಯೇ, ಸಾಕುಮಾಡು
ಈ ನಿನ್ನ ಆಟವನ್ನ  
ಹೃದಯವನು ಗೋಗೆರೆದು
ಮೌನವನು ನೀ ತೊರೆದು 
ಮಾತಲ್ಲೇ ಮನಸನ್ನು 
ಮುದ್ದಾಡು ಚೆಲುವೆ 

ಬೆಳದಿಂಗಳ ರಾತ್ರಿಲಿ 
ಮಹಡಿಯಲಿ ನೀ ಕುಳಿತು 
ತೋಳಲಿ ನನ್ನ ಮಲಗಿಸಿ 
ತಲೆ ಸವರು, ನನ್ನೊಲವೇ


ತಂಗಾಳಿ,
ನಾ ನಿಲ್ಲಲ್ಲು ನಿನ್ನ ಎದುರಲಿ 
ಹಾದು ಹೋಗುವುದು ನೆನಪುಗಳು,
ನಿನ್ನ ಜೊತೆಯಲಿ

ಇದ್ದಿರಬಹುದು
ಅವಳ ಉಸಿರು ನಿನ್ನಲಿ
ಬೆರೆತಂತೆ ಭಾಸವಾಗಿದೆ
ಈ ಕ್ಷಣ, ನನ್ನುಸಿರಲಿ     

Wednesday, May 21, 2014

ಓ ಮನಸೇ,
ನಿಲ್ಲದ್ದಿರು ನನ್ನೆದುರು ಪ್ರಶ್ನೆಯಾಗಿ

ಹೆಕ್ಕಿ ತೆಗೆಯದಿರು,
ಆ ನೆನಪುಗಳ, ಒಂದೊಂದಾಗಿ 

ಮಂಜು ಕಟ್ಟಿದ ಕಣ್ಣಲಿ,
ಮೂಡುವಳು ಅವಳು ಬಿಂಬವಾಗಿ

ಆ ಬಿಂಬವು ಕರಗಿ,
ಇಳಿಜಾರುವುದು ಕಂಬನಿಯಾಗಿ

ಮೂಕಾದ ಹೃದಯ,
ತೊದಲುವುದು ಬಡಿತವಾಗಿ

ಓ ಮನಸೇ... 

ಬಿಟ್ಟುಬಿಡು ಎನ್ನ,
ಇದ್ದುಬಿಡುವೆ ನಿನ್ನಿಂದ ದೂರವಾಗಿ


ಕಾಡುತಿದೆ ಎನ್ನ,
ಹೀಗೊಂದು ಹೃದಯ 

ಪ್ರೀತಿಯನು ಚೆಲ್ಲಿ,
ಮರಳು ಮಾಡುವ ಸಮಯ 

ಅರಿಯದೆ ಮೂಡಿದ ಭೀತಿಯಲಿ,
ಅಡಗಿದೆ ಒಲವಿನ ವಿಸ್ಮಯ 

ಓ ಮನಸೇ... 

ದಾಟದಿರು ಪ್ರೀತಿಯ ಕಾಲುವೆಯ 
ಆಗದಿರು ಅವಳಲಿ, ನೀ ತನ್ಮಯ

ಇದ್ದುಬಿಡು ಹೇಗೇ...  

ಇರುವನು ನಿನ್ನ ಜೊತೆಯಲಿ
ಚಂದಿರನೆಂಬ ಗೆಳೆಯ

Friday, March 14, 2014

ಕೊನೆಯ ಸಾಲು

ಮುಗಿಯದ ಪ್ರೀತಿಯ ಕಾವ್ಯಕೆ,
ಕೊನೆಯ ಸಾಲೊಂದು ಬರೆಯಬೇಕಿದೆ.. 

ಹಾದು ಹೋಗು ಒಮ್ಮೆ,  ಓ ಹುಡುಗಿ 

ನಿನ್ನ ಗೆಜ್ಜೆಯ ಸದ್ದಲ್ಲಿ, 
ಆ ಪದಗಳು ಅಡಗಿದೆ   

Wednesday, January 29, 2014

ಅರಿಯದೆ ಮೂಡಿದ ಭಾವ, ಈ ಹನಿಗವನ

ನಿದಿರೆಗೂ ಗೊತ್ತಿರಲಿಲ್ಲ 
ತನ್ನ ಕನಸು ನೀನೆಂದು;
ಹೃದಯಕೂ ತಿಳಿದಿರಲಿಲ್ಲ 
ಆ ಮಿಡಿತ ನಿನದೆಂದು  

Tuesday, October 15, 2013

ಯಾರೋ..?



ಕಣ್ಣ ರೆಪ್ಪೆಯ ತೆರೆಯಮೇಲೆ
ನಿನ್ನ ಚಿತ್ರವ ಬಿಡಿಸಿದವರು ಯಾರೋ..?

ಕಣ್ಣು ಮುಚ್ಚಿದ ಪ್ರತಿ ಸಲ
ಎದುರಲಿ ನಿನ್ನ ನಿಲ್ಲಿಸುವವರು ಯಾರೋ..?


ಮನದ ಈ ತುಡಿತಕೆ,
ಮೌನದ ಭಾಷೆ ಕಲಿಸಿದವರು ಯಾರೋ..?

ಕೆನ್ನೆಯ ತೋಯಿಸುವ ಹನಿಗಳಿಗೆ
ನೆನಪುಗಳ ಪರಿಚಯ ಮಾಡಿಸಿದವರು ಯಾರೋ..?


ನನ್ನ ಇತಿಹಾಸದ ಪುಟದಲಿ,
ನಿನ್ನ ಮಂದಹಾಸವ ಸೇರಿಸಿದವರು ಯಾರೋ..?

ನಿನ್ನ ನುಡಿಮುತ್ತುಗಳ ಜೋಡಿಸಿ,
ಎದೆಯ ಚಿಪ್ಪಿನಲಿ ಕೂಡಿಟ್ಟವರು ಯಾರೋ..?


ಈ ಪ್ರೀತಿಯೆಂಬ ಮಾಯೆಗೆ,
ಕೊಲೆ ಮಾಡುವ ಕಲೆ, ಕಲಿಸಿದವರು ಯಾರೋ..?

ಹೃದಯದ ಮೂಲೆಯಲಿ ಅವಿಸಿಟ್ಟರು,
ಮತ್ತೆ ನಿನ್ನ ಹೆಕ್ಕಿ ತೆಗೆಯುವವರು ಯಾರೋ..?