ಮರಳಿದ ಮನಸೇ ನಿನ್ನ ಕನಸಿಗೆ, ಕೊಡಲಾರೆ ತುಸು ಜಾಗವ ಎಲ್ಲವು ಹೊತ್ತೋಯ್ದ ನೀನು ಬರಿ ಕನಸ ತಂದರೆ, ಕಟ್ಟಲಾರೆ ಪ್ರೀತಿ ಗೋಪುರವ ಇನ್ನುಳಿದಿರುವುದು ನಾನು ಮತ್ತೆ ಅವಳ ನೆನಪು, ಮರಯಲಾರೆ ಅವಳು ಬಿಟ್ಟು ಹೋದ ಆ ಕ್ಷಣವ ಬದುಕಲು ತುಸು ಕಷ್ಟ ಆದರು ಪ್ರೇಮಿಯೆಂಬ ಜಂಬ, ಸಾಲದೇ ಬದುಕಲು ಈ ಜಂಬವ?
Wednesday, June 11, 2014
ಹೃದಯ ಬಿಚ್ಚಿ ಹೇಳುವ ಮುನ್ನ,
ನೀ ಏಕೆ, ದೂರ ಸರಿದೆ ನನ್ನ
ಉರುಳುವ ಕಾಲಕೆ ಎದುರಾಗಿ ನಿಂತು
ಕಾಯುತಿರುವೆ ನಾ, ಆ ಕ್ಷಣವನ್ನ
ಒಂದೊಮ್ಮೆ ಯಾರೋ,
ಕೂಗಿದಂತೆ ನನ್ನ
ತಿರುಗು ನೋಡಿ
ಸುಮ್ಮನಾಗುವ ಮುನ್ನ
ಪಿಸುಗುಟ್ಟಿದೆ ಹೃದಯ,
ಅವಳ ಹೆಸರನ್ನ
ಓ ಪ್ರೀತಿಯೇ, ಸಾಕುಮಾಡು
ಈ ನಿನ್ನ ಆಟವನ್ನ
ಹೃದಯವನು ಗೋಗೆರೆದು
ಮೌನವನು ನೀ ತೊರೆದು
ಮಾತಲ್ಲೇ ಮನಸನ್ನು
ಮುದ್ದಾಡು ಚೆಲುವೆ
ಬೆಳದಿಂಗಳ ರಾತ್ರಿಲಿ
ಮಹಡಿಯಲಿ ನೀ ಕುಳಿತು
ತೋಳಲಿ ನನ್ನ ಮಲಗಿಸಿ
ತಲೆ ಸವರು, ನನ್ನೊಲವೇ
ತಂಗಾಳಿ, ನಾ ನಿಲ್ಲಲ್ಲು ನಿನ್ನ ಎದುರಲಿ ಹಾದು ಹೋಗುವುದು ನೆನಪುಗಳು, ನಿನ್ನ ಜೊತೆಯಲಿ ಇದ್ದಿರಬಹುದು ಅವಳ ಉಸಿರು ನಿನ್ನಲಿ ಬೆರೆತಂತೆ ಭಾಸವಾಗಿದೆ ಈ ಕ್ಷಣ, ನನ್ನುಸಿರಲಿ
Wednesday, May 21, 2014
ಓ ಮನಸೇ, ನಿಲ್ಲದ್ದಿರು ನನ್ನೆದುರು ಪ್ರಶ್ನೆಯಾಗಿ
ಹೆಕ್ಕಿ ತೆಗೆಯದಿರು, ಆ ನೆನಪುಗಳ, ಒಂದೊಂದಾಗಿ
ಮಂಜು ಕಟ್ಟಿದ ಕಣ್ಣಲಿ, ಮೂಡುವಳು ಅವಳು ಬಿಂಬವಾಗಿ ಆ ಬಿಂಬವು ಕರಗಿ, ಇಳಿಜಾರುವುದು ಕಂಬನಿಯಾಗಿ
ಮೂಕಾದ ಹೃದಯ, ತೊದಲುವುದು ಬಡಿತವಾಗಿ ಓ ಮನಸೇ...
ಬಿಟ್ಟುಬಿಡು ಎನ್ನ, ಇದ್ದುಬಿಡುವೆ ನಿನ್ನಿಂದ ದೂರವಾಗಿ
ಕಾಡುತಿದೆ ಎನ್ನ, ಹೀಗೊಂದು ಹೃದಯ
ಪ್ರೀತಿಯನು ಚೆಲ್ಲಿ, ಮರಳು ಮಾಡುವ ಸಮಯ
ಅರಿಯದೆ ಮೂಡಿದ ಭೀತಿಯಲಿ, ಅಡಗಿದೆ ಒಲವಿನ ವಿಸ್ಮಯ
ಓ ಮನಸೇ...
ದಾಟದಿರು ಪ್ರೀತಿಯ ಕಾಲುವೆಯ ಆಗದಿರು ಅವಳಲಿ, ನೀ ತನ್ಮಯ ಇದ್ದುಬಿಡು ಹೇಗೇ...