ಜಾರುತಿದೆ ನನ್ನ ಹೃದಯ ನೋಡುತ ನಿನ್ನ ಈ ಸಮಯ ಅಂತರಾಳಕೆ ನಿನ್ನ ಪರಿಚಯ ಮಾಡಿಸಿದ ಈ ಪ್ರೀತಿ, ನಿಜಕೂ ವಿಸ್ಮಯ
Friday, August 7, 2015
ಕಡಲ ಮಡಿಲಿಗೆ
ಬಲೆಯ ಎಸೆದು
ಮೀನು ಹಿಡಿಯುವ
ಮೀನುಗಾರನ ಮಡಿಲು ಕೂಡ ಕಡಲೇ
- ಅಭಿ
Monday, July 6, 2015
ಬಯ್ದವಳೊಂದಿಗೆ ಶುರುವಾಯಿತು,
ಒಂದು ಪರಿಚಯ
ಅವಳಾಡಿದ ಪ್ರತಿ ಮಾತಿಗೂ,
ಬರೆದೆ ಒಂದು ಕವಿತೆಯ
ತುಸು ದೂರ ನಡೆದು ,
ಅವಳು ಹಿಂದುರಿಗಿ ನೋಡಿದ ಸಮಯ
ಆಗಲೇ ತಿಳಿದಿತ್ತು,
ನನ್ನ ಪ್ರೀತಿಗೆ ಜಾರಿತ್ತು ಅವಳ ಹೃದಯ
Monday, May 25, 2015
ನದಿಯ ದಡದಲಿ ಕೂತು, ಹರಿಯುವ ನೀರಿನ ಶಬ್ದ ಕೆಳುತಿದ್ದಂತೆ
ಸದ್ದು ಮಾಡುತಿದ್ದ ನನ್ನ ಭಾವನೆಗಳೆಲ್ಲ, ಒಮ್ಮೆಲೇ ಮೌನವಾಗಿತ್ತು!!!
ಮರಳಿದ ಮನಸೇ ನಿನ್ನ ಕನಸಿಗೆ, ಕೊಡಲಾರೆ ತುಸು ಜಾಗವ ಎಲ್ಲವು ಹೊತ್ತೋಯ್ದ ನೀನು ಬರಿ ಕನಸ ತಂದರೆ, ಕಟ್ಟಲಾರೆ ಪ್ರೀತಿ ಗೋಪುರವ ಇನ್ನುಳಿದಿರುವುದು ನಾನು ಮತ್ತೆ ಅವಳ ನೆನಪು, ಮರಯಲಾರೆ ಅವಳು ಬಿಟ್ಟು ಹೋದ ಆ ಕ್ಷಣವ ಬದುಕಲು ತುಸು ಕಷ್ಟ ಆದರು ಪ್ರೇಮಿಯೆಂಬ ಜಂಬ, ಸಾಲದೇ ಬದುಕಲು ಈ ಜಂಬವ?
Wednesday, June 11, 2014
ಹೃದಯ ಬಿಚ್ಚಿ ಹೇಳುವ ಮುನ್ನ,
ನೀ ಏಕೆ, ದೂರ ಸರಿದೆ ನನ್ನ
ಉರುಳುವ ಕಾಲಕೆ ಎದುರಾಗಿ ನಿಂತು
ಕಾಯುತಿರುವೆ ನಾ, ಆ ಕ್ಷಣವನ್ನ