Sunday, June 27, 2010

ಪ್ರೀತಿ ಹುಟ್ಟಿದ ಸಮಯ.....


ಒಲವೇ ನಿನ್ನ ಚೆಲುವ ಚೆಲ್ಲಿ
ದೋಚಿದೆ ನನ್ನ ಹೃದಯ....
ದೋಚಿದ ಹೃದಯದಲಿ ನೀ
ಸುರಿಸಿದೆ ಪ್ರೀತಿಯ ಮಳೆಯ....

ನಿನ್ನ ನೋಟದಲಿ ಅಡಗಿತ್ತು
ಅರಿಯದ ಮೂಕ ವಿಸ್ಮಯ....
ಆ ಕಣ್ಣಿನ ನೋಟಕೆ ಸಿಲುಕಿ
ನನ್ನ ಮನವಾಯಿತು ತನ್ಮಯ....

ಮರು ಕ್ಷಣದಲೇ ನನಗಾಯಿತು
ನಿನ್ನ ಹೃದಯದ ಪರಿಚಯ....
ನಮಿಬ್ಬರ ಮದ್ಯೆ ನಡೆದಿತ್ತು
ಸ್ನೇಹ ಪ್ರೀತಿಯ ಪರಿಣಯ....

ನಮ್ಮಿಬ್ಬರ ಭಾವನೆಗಳು
ಒಂದಾಗಿ ಸೇರಿದ ಸಮಯ....
ತಿಳಿಸಿದೆ ನಾನು ನಿನಗೆ
ನನ್ನಂತರಾಳದ ಪ್ರೀತಿಯ....

Sunday, June 20, 2010

ಮರೆಯಾಗುವ ಬಾ.....


ಕರಗುವ ಹನಿಗಳ ಜೊತೆಯಲಿ
ಕುಣಿಯುವ ಬಾ ಮಳೆಯಲಿ.....
ಸುರಿಯುವ ಮುಂಜಾನೆ ಮಂಜಲಿ
ಬಚ್ಚಿಡುವೆ ನಿನ್ನ ಈ ಎದೆಯಲಿ.....

ಪ್ರೀತಿಯ ಅಲೆಗಳ ಮಡಿಲಲಿ
ತೇಲುವ ಬಾ ನೆನಪಿನ ದೋಣಿಯಲಿ.....
ಹೃದಯ ಬರೆದ ಕವಿತೆಯಲಿ
ಮರೆಯಾಗುವ ಬಾ ಸವಿಗನಸಲಿ.....