Tuesday, October 15, 2013

ಯಾರೋ..?ಕಣ್ಣ ರೆಪ್ಪೆಯ ತೆರೆಯಮೇಲೆ
ನಿನ್ನ ಚಿತ್ರವ ಬಿಡಿಸಿದವರು ಯಾರೋ..?

ಕಣ್ಣು ಮುಚ್ಚಿದ ಪ್ರತಿ ಸಲ
ಎದುರಲಿ ನಿನ್ನ ನಿಲ್ಲಿಸುವವರು ಯಾರೋ..?


ಮನದ ಈ ತುಡಿತಕೆ,
ಮೌನದ ಭಾಷೆ ಕಲಿಸಿದವರು ಯಾರೋ..?

ಕೆನ್ನೆಯ ತೋಯಿಸುವ ಹನಿಗಳಿಗೆ
ನೆನಪುಗಳ ಪರಿಚಯ ಮಾಡಿಸಿದವರು ಯಾರೋ..?


ನನ್ನ ಇತಿಹಾಸದ ಪುಟದಲಿ,
ನಿನ್ನ ಮಂದಹಾಸವ ಸೇರಿಸಿದವರು ಯಾರೋ..?

ನಿನ್ನ ನುಡಿಮುತ್ತುಗಳ ಜೋಡಿಸಿ,
ಎದೆಯ ಚಿಪ್ಪಿನಲಿ ಕೂಡಿಟ್ಟವರು ಯಾರೋ..?


ಈ ಪ್ರೀತಿಯೆಂಬ ಮಾಯೆಗೆ,
ಕೊಲೆ ಮಾಡುವ ಕಲೆ, ಕಲಿಸಿದವರು ಯಾರೋ..?

ಹೃದಯದ ಮೂಲೆಯಲಿ ಅವಿಸಿಟ್ಟರು,
ಮತ್ತೆ ನಿನ್ನ ಹೆಕ್ಕಿ ತೆಗೆಯುವವರು ಯಾರೋ..?