Tuesday, March 8, 2011

ಹನಿ ಹನಿ ಮಳೆ ಹನಿ....

ಹನಿ ಹನಿ ಮಳೆ ಹನಿ
ಕಾತುರ ನಿನಗೇತಕೆ....??
ಮನದಾಳದ ಮುಗಿಲಲಿ
ಕರಗುವೆ ನೀನೇತಕೆ....??

ಸುರಿಯಲು ನೀ ಪ್ರತಿಸಲ
ಸೇರುವೆ ನೆನಪಿನಂಗಳ....

ನಿನ್ನಲ್ಲಿ
ನಾ ಬೆರೆಯಲು
ಎದೆಯಲಿ ಏನೋ ತಳಮಳ....

ಜೊತೆಯಲಿ ತಂದೆ ನೀ
ಒಂದು ಮೌನದ ಕಾಣಿಕೆ....
ತೆರೆದು ನಾ ನೋಡಲು
ತಿಳಿಯಿತು ನಿನ್ನ್ನ ಕೋರಿಕೆ....

ಹನಿ ಹನಿ ಮಳೆ ಹನಿ
ಕಾತುರ ನಿನಗೇತಕೆ....???

ಹೃದಯದ ಪುಟದಲಿ
ಬರೆದೆ ಪ್ರೀತಿಯ ಶೀರ್ಷಿಕೆ....
ಓದುತಿರಲು ಅದನು ನಾ
ಒಲವು ಬಂತು ಸನಿಹಕೆ....

ತೋರಿಸುವೆಯ ಎನ್ನ ಚೆಲುವೆಯ
ಬರೆದಂತೆ ಮೌನ ಕವಿತೆಯ....
ಮಾಡಿಸಲು ಅವಳ ಪರಿಚಯ
ಜೊತೆಯಲಿ ನೀನು ಬರುವೆಯಾ....??


ಹನಿ ಹನಿ ಮಳೆ ಹನಿ
ಕಾತುರ ನಿನಗೇತಕೆ...???