ಮೌನದ ಅಲೆಯೊಂದು
ಮನದಾಳವನು ತಟ್ಟಿ
ಮಾತನೆಲ್ಲ ತನ್ನ ಜೊತೆ ಸೆಳೆದು
ಪ್ರೀತಿಯ ದೋಣಿಯಲಿ ಸಾಗಿದ
ಆ ನನ್ನ ಚೆಲುವೆಯ
ಕೆಂದುಟಿಗಳ ಮೇಲೆ ನಗುವಾಗಿ ಕಂಡಿದೆ ಇಂದು....
ಎಲ್ಲಾ ಕಳೆದುಕೊಂಡರು
ಇನ್ನೂ ಏನೋ ನನ್ನ ಜೊತೆ ಇರುವಂತೆ
ಕಣ್ಣುಗಳ ಮುಚ್ಚಿ ಕೇಳಲು
ಬಡಿತವು ಪಿಸುಗುಟ್ಟಿತು
ಅದು ನಿನ್ನ ಉಸಿರೆಂದು
ಹಸಿರಾಗಿ ಇನ್ನೂ ಈ ಕಣ್ಣೊಳಗೆ
ಕಾರಂಜಿಯಾಗಿ ಕಂಡಿದೆ ಇಂದು....
ನೂರಾರು ಭಾರಿ
ಸಾವಿರ ದಾರಿ ಹುಡುಕಿದರೂ
ಮತ್ತೆ ಕಂಡಿಲ್ಲ ಅವಳನ್ನು
ಬರುವಳೇನೋ ಎಂಬ ಸಣ್ಣ ಆಸೆಯಿಂದ
ಬಡಿಯುವ ಈ ಹೃದಯದ ಜೊತೆ
ದಾರಿ ಕಾಯುತ ಕುಳಿತಿರುವೆ
ಅವಳ ಸವಿಗನಸಲ್ಲಿ ಇಂದು....