ಬಣ್ಣದ ಪ್ರೀತಿಗೆ, ಮೌನವೆಂಬ ಮೋಡವು ಮುಸುಗಿದೆ
ಗುಡುಗು ಮಿಂಚಾಗಿ ನಿನಗೆ ಕಾಣಲಿ,
ಕರಗಿ ಮಳೆಯಾಗಿ ಸುರಿಯಲಿ
ನಿನ್ನ ಮನದಲಿ,
ಇಬ್ಬನಿಯಾಗಿ ಸೇರಿ, ನೆನಪಾಗಿ ಕರಗಿದರು ಸರಿಯೇ
ಅಥವಾ
ನಿನ್ನೆದೆಯ ಚಿಪ್ಪಲಿ ಸೇರಿ, ಮುತ್ತಾಗಿ ಉಳಿದರು ಸರಿಯೇ
ಏನೇ ಆಗಲಿ,
ಈ ನನ್ನ ಪ್ರೀತಿ, ಸೇರಲಿ ನಿನ್ನಲಿ
ಇದ್ದುಬಿಡಲಿ,
ಕೊನೆಯ ಉಸಿರಲ್ಲೂ, ನಿನ್ನ ಜೊತೆಯಲಿ