ನನ್ನ ಮಾತಿಗೆ ನಿಮ್ಮ ಮೌನ ಜೊತೆಯಾಗಲಿ ನನ್ನ ಹೃದಯಕೆ, ನಿಮ್ಮ ಮಿಡಿತ ಉಸಿರಾಗಲಿ ಈ ಕಣ್ಣುಗಳಿಗೆ, ನಿಮ್ಮ ಕನಸು ಕೊಸರಾಗಲಿ ಈ ಪ್ರೀತಿಗೆ, ನಿಮ್ಮ ನಗುವೇ ಸಮ್ಮತಿಯಾಗಲಿ ನಮ್ಮಿಬ್ಬರ ಮಿಲನಕೆ, ನಿಮ್ಮೊಲವೇ ಸಾಕ್ಷಿಯಾಗಲಿ...
Tuesday, August 6, 2013
ಮನಸೇಕೋ ಹಪಿಸಿದೆ ಇಂದು, ಅವಳನ್ನು ಒಮ್ಮೆ ನೋಡಲೆಂದು.... ಕಾಡಿದೆ ಅರಿಯದ ಭಯವೊಂದು, ನಿಲ್ಲುವುದೇನೋ ಈ ಹೃದಯ, ಆ ಕ್ಷಣವೆಂದು.... ಹೇಳಬೇಕಿದೆ ಅವಳಿಗೆ ಮಾತೊಂದು ಇಂದಿಗೂ ಈ ಹೃದಯಕೆ ಒಡತಿ, ತಾನೆಂದು... ಪಡೆಯಬೇಕಾಗಿದೆ ಅವಳ ಅಪ್ಪಣೆಯೊಂದು, ಮಲಗಲು ತನ್ನ ಮಡಿಲಲಿ, ಕ್ಷಣವೊಂದು.... ನನ್ನ ಕೊನೆಯ ಆಸೆ ಪೂರೈಸಿದೆಯೆಂದು, ಹೇಳುತ, ಕಣ್ಮರೆಯಾಗಬೆಕೆನಿಸಿದೆ ಇಂದು....