Sunday, May 31, 2009

ಆಸೆ ......


ಜೀವದ ಕಡಲಲ್ಲಿ
ಮೌನದ ಅಲೆಗಳಾಗಿ
ಮೀಟುತಿರುವಳು ಅವಳು.....
ಆ ಮೌನದ ಹಾಡಿನಲಿ
ರಾಗವಾಗಿ ಬೆರೆಯುವ ಆಸೆ ನನ್ನದು......
ಹೃದಯದ ಹಾದಿಯಲ್ಲಿ
ಒಲವಿನ ಹೂವಾಗಿ
ನಗುತಿರುವಳು ಅವಳು ......
ಆ ಹೂವಿನೆದೆಯಲ್ಲಿ
ಮಧುವಾಗಿ ಸೇರುವ ಆಸೆ ನನ್ನದು......
ಮನದ ಮುಗಿಲಿನಲ್ಲಿ
ಪ್ರೀತಿಯ ಹನಿ ತುಂಬಿದ
ಚಲಿಸುವ ಮೇಘ ಅವಳು......
ಮೇಘಗಳ ಮಧ್ಯೆ ನಾ ಮಿಂಚಂತೆ ಬಂದು
ಕ್ಷಣವಾದರೂ ಅವಳ ಜೊತೆ ಕಳೆಯುವ ಆಸೆ ನನ್ನದು......
ಕಣ್ಣುಗಳ ಕಾರಂಜಿಯಲ್ಲಿ
ಸವಿ ಕನಸುಗಳಾಗಿ
ಕುನಿಯುತಿರುವಳು ಅವಳು......
ಆ ಕನಸುಗಳಿಗೆ ಕಾಮನಬಿಲ್ಲಿನಂತೆ
ರಂಗು ಚೆಲ್ಲುವ ಆಸೆ ನನ್ನದು .......

Tuesday, May 26, 2009

ಕಮಲ


ನನ್ನವಳು ಎಲ್ಲರು ಇಷ್ಟ ಪಡುವ ರೋಜಾ ಹೂವಲ್ಲ,
ನಾ ಪ್ರೀತಿಸುವ ನೀಲಿ ಕಮಲ ಅವಳು.
ಆ ಹೂವ ಪಡೆಯುವ ಆಸೆಯಿಂದ,
ಪ್ರೀತಿಯ ನೀರಲಿ ಧುಮುಕಿದೆ,
ಈಜು ಬರದ ನಾನು ಆ ನೀರಿನಲ್ಲೇ ಮುಳುಗಿದೆ,
ಆ ಹೂವಿನ ಬೇರಿನಲ್ಲಿ ಮಣ್ಣಾಗಿ ನಾ ಸೇರಿದೆ,
ಆ ಹೂವಿನ ನಗೆಯಲ್ಲಿ ನಗುತ ನಾ ಮರೆಯಾದೆ.
ಯಾರು ಬರಲಿಲ್ಲ ನನ್ನ ಹುಡುಕಲೆಂದು,
ಆ ಹೂವು ಬಿಟ್ಟು ಹೋಯಿತು ನನನ್ನು ಬೇಡ ಎಂದು,
ಅಲ್ಲಿಯೇ ಕಾದಿರುವೆ ಆ ಹೂವು ಒಮ್ಮೆಯಾದರು ನನಗಾಗಿ ಬರುವುದೆಂದು,
ಕಾದು ಸೋತಿರುವೆ ಈ ಜೀವನದಲ್ಲಿ ಇಂದು,
ಆದರು ನನ್ನ ಪ್ರೀತಿ ಸಾಯದು ಎಂದೆಂದೂ...

Saturday, May 23, 2009

ಮೌನ ....


ಮೌನದಿ ನಿನ್ನ ನೋಡಿದೆ,
ಮೌನದ ಪ್ರೀತಿ ಮಾಡಿದೆ,
ಮೌನದ ಆ ಮುದ್ದು ನಗುವನು,
ಮೌನದಿ ಕಂಡು ಬೆರಗಾದೆ,

ಮೌನದಿ ಮನಸು ನಾ ಕೊಟ್ಟೆ,
ಮೌನದ ಹೃದಯ ನಿನಗೆ ಬರೆದಿಟ್ಟೆ,
ಮೌನದ ಆ ನೆನಪುಗಳಲ್ಲೇ,
ಮೌನದಿ ಜೀವನ ಸಾಗಿದೆ...

Tuesday, May 5, 2009



ಮನವೆಂಬ ಮುಗಿಲಿನಲ್ಲಿ,
ಆಸೆಯೆಂಬ ಮೋಡವು ಕರಗಿ,
ನನ್ನ ಪ್ರೀತಿ ಎಂಬ ಹನಿಗಳು,
ನಿನ್ನ ಜೀವದ ಕಡಲಲ್ಲಿ ಇರುವ,
ಹೃದಯದ ಚಿಪ್ಪಿನಲ್ಲಿ,
ಸ್ವಾತಿ ಮುತ್ತಾಗಿ ಇರಲಿ,
ಚಿರ ಕಾಲ, ಚಿರಕಾಲ .........