Sunday, May 31, 2009

ಆಸೆ ......


ಜೀವದ ಕಡಲಲ್ಲಿ
ಮೌನದ ಅಲೆಗಳಾಗಿ
ಮೀಟುತಿರುವಳು ಅವಳು.....
ಆ ಮೌನದ ಹಾಡಿನಲಿ
ರಾಗವಾಗಿ ಬೆರೆಯುವ ಆಸೆ ನನ್ನದು......
ಹೃದಯದ ಹಾದಿಯಲ್ಲಿ
ಒಲವಿನ ಹೂವಾಗಿ
ನಗುತಿರುವಳು ಅವಳು ......
ಆ ಹೂವಿನೆದೆಯಲ್ಲಿ
ಮಧುವಾಗಿ ಸೇರುವ ಆಸೆ ನನ್ನದು......
ಮನದ ಮುಗಿಲಿನಲ್ಲಿ
ಪ್ರೀತಿಯ ಹನಿ ತುಂಬಿದ
ಚಲಿಸುವ ಮೇಘ ಅವಳು......
ಮೇಘಗಳ ಮಧ್ಯೆ ನಾ ಮಿಂಚಂತೆ ಬಂದು
ಕ್ಷಣವಾದರೂ ಅವಳ ಜೊತೆ ಕಳೆಯುವ ಆಸೆ ನನ್ನದು......
ಕಣ್ಣುಗಳ ಕಾರಂಜಿಯಲ್ಲಿ
ಸವಿ ಕನಸುಗಳಾಗಿ
ಕುನಿಯುತಿರುವಳು ಅವಳು......
ಆ ಕನಸುಗಳಿಗೆ ಕಾಮನಬಿಲ್ಲಿನಂತೆ
ರಂಗು ಚೆಲ್ಲುವ ಆಸೆ ನನ್ನದು .......

No comments:

Post a Comment