Tuesday, March 23, 2010

ಪ್ರೀತಿ


ಮನದಾಳದ ಮಾತಿಗೆ,
ಹೃದಯದಾಳದ ಬಡಿತವಾಗಿ,
ಉದಯಿಸಿತು ಈ ಪ್ರೀತಿ.....

ಅವಳ ಕಣ್ಣೋಟಕೆ ಸಿಲುಕಿ,
ಕನಸಿನ ಲೋಕದಲಿ ಅಲೆದಾಗ,
ಎದುರಾದ ಮಧುರ ಕನಸು ಈ ಪ್ರೀತಿ.....

ಅವಳ ಅಂದಕೆ ಶರಣಾಗಿ,
ನನ್ನ ಮಾತೆಲ್ಲ ಮೌನವಾದಾಗ,
ಮೂಡಿದ ಸವಿ ಭಾವ ಈ ಪ್ರೀತಿ.....

ಅವಳ ತುಂಟ ನಗುವಿನಲ್ಲಿ,
ನಾ ಮರೆಯಾದ ಕ್ಷಣಗಳ ನೆನೆಯುತ,
ಮುಂದೆ ಸಾಗುವ ಪರಿಯೇ ಈ ಪ್ರೀತಿ.....

Friday, March 12, 2010

ಕಾಯುತಿರುವೆ ನಿನಗಾಗಿ......


ಸಿಗದ ಪ್ರೀತಿಯ ಕಡೆಗೆ
ಸಾಗುತಿದೆ ನನ್ನೊಲವಿನ ಪಯಣ....
ಮರೆಯಲಾಗದ ಆ ಕ್ಷಣಗಳಿಗೆ
ಸೋತಿದೆ ನನ್ನ ಈ ಮನ....


ಸುತ್ತಲು ಸುಳಿಯುವ ನೆನಪುಗಳಿಗೆ
ಶರಣಾಗಿದೆ ನನ್ನ ಒಂಟಿತನ....
ನೀ ಬಿಟ್ಟು ಹೋದ ಕನಸುಗಳಿಗೆ
ಅರ್ಪಿಥವಾಗಿದೆ ನನ್ನ ಈ ನಯನ....


ನೀ ದೂರಾದ ಹಾದಿಯಲ್ಲಿ
ಮೌನದಿ ಸಾಗಿದೆ ಜೀವನ....
ನೀ ಬರುವ ದಾರಿಯ
ಕಾಯುತ ಕುಳಿತಿದೆ ಈ ಪ್ರಾಣ....