Tuesday, November 29, 2011

ಪ್ರೀತಿ




ಒಲವಿನ ಸೇತುವೆ ಮೇಲೆ 
ಹರಿದಾಡಿದ  ಪ್ರೀತಿ 
ಹೃದಯದೊಳಗೆ  ಇಳಿದು 
ಬಡಿತವ ನಿಲ್ಲಿಸಿ ಹೋಯಿತು 

ಕನಸಿನ ಕಾಗದದ ಮೇಲೆ 
ಅಕ್ಷರವಾದ ಈ  ಪ್ರೀತಿ 
ಕಣ್ಣಿನಲ್ಲಿ ಆಸೆಯಾಗಿ ಸೇರಿ 
ಕಣ್ಣೀರ ಸುರಿಸಿ ಹೋಯಿತು 

ಎಲ್ಲಿ ಹೋದರೆ ಅಲ್ಲಿ ಕಾಣುವ 
ಪ್ರತಿಬಿಂಬ, ಈ ಪ್ರೀತಿ 
ಕಗತ್ತಲ್ಲಲಿ ಸೇರಿ 
ಅಂಧಕಾರವ ಉಳಿಸಿ ಹೋಯಿತು

ಜೀವನದ ದಾರಿಯಲ್ಲಿ 
ಹೂವಾಗಿ ಅರಳಿದ್ದ ಈ ಪ್ರೀತಿ 
ಮುಳ್ಳಾಗಿ ಸೇರಿ 
ಜೀವ ತೆಗೆದು ಹೋಯಿತು 

Monday, November 7, 2011

ದೂರಾಗಬೇಕು ನಾ ನಿನ್ನಿ೦ದ....



ದೂರಾಗಬೇಕು ನಾ ನಿನ್ನಿ೦ದ
ನಿನ್ನ ಮೇಲಿಟ್ಟ ಪ್ರೀತಿಯಿ೦ದ
ದೂರಾಗಬೇಕು ಈ ನೆನಪುಗಳಿ೦ದ
ನೆನಪುಗಳು ತರುವ ನೋವಿನಿ೦ದ

ದೂರಾಗಬೇಕು ಈ ಭಾವನೆಗಳಿ೦ದ
ಈ ಭಾವನೆಗಳು ಮೂಡಿಸುವ ಆಸೆಯಿ೦ದ
ದೂರಾಗಬೇಕು ನಿನ್ನ ಕನಸುಗಳಿ೦ದ
ಕನಸುಗಳು ಬ೦ದಾಗ ಬರುವ ಕಣ್ಣೀರಿನಿ೦ದ

ದೂರವಾಗಿ ಉಳಿಯಲು ನಾ ನಿನ್ನಿ೦ದ
ದೂರಾಗಬೇಕು ಈ ಹೃದಯದಿ೦ದ
ಹೃದಯದಲ್ಲಿರುವ ಪ್ರೀತಿಯಿ೦ದ
ಆ ಪ್ರೀತಿಗಾಗಿ ಕಾಯುತಿರುವ ನನ್ನಿ೦ದ...