ಮೌನವು ಮಾತಾದಾಗ
ಕಣ್ಣಿನ ನೋಟವೇ ಭಾಷೆಯಾದಾಗ
ಸ್ಪಂದನೆಯೇ ಭಾವನೆಯಾದಾಗ
ಎದೆಯೊಳಗೆ ಝಲ್ಲೆನುವ ಆ ಶಬ್ದವೇ ಪ್ರೀತಿ
ಕನಸೆಲ್ಲಾ ಆಸೆಯಾದಾಗ
ಮನಸಲ್ಲೇ ಮನಸೂರೆಯಾದಾಗ
ಕಣ್ಣಲಿ ಮಿಂಚು ಮೂಡಿದಾಗ
ಮುಖದಲ್ಲಿ ಚಿಮ್ಮುವ ಆ ನಗುವೇ ಪ್ರೀತಿ
ಮತ್ತೆ ಮತ್ತೆ ತಿರುಗಿ ನೋಡಿದಾಗ
ಎರಡು ಹೃದಯಗಳ ಸಮ್ಮಿಲನವಾದಾಗ
ಮಂದಹಾಸಗಳ ಪರಿಚಯವಾದಾಗ
ಹತ್ತಿರ ಸೆಳಯುವ ಆ ಸೆಳೆತವೆ ಪ್ರೀತಿ