Tuesday, October 15, 2013

ಯಾರೋ..?



ಕಣ್ಣ ರೆಪ್ಪೆಯ ತೆರೆಯಮೇಲೆ
ನಿನ್ನ ಚಿತ್ರವ ಬಿಡಿಸಿದವರು ಯಾರೋ..?

ಕಣ್ಣು ಮುಚ್ಚಿದ ಪ್ರತಿ ಸಲ
ಎದುರಲಿ ನಿನ್ನ ನಿಲ್ಲಿಸುವವರು ಯಾರೋ..?


ಮನದ ಈ ತುಡಿತಕೆ,
ಮೌನದ ಭಾಷೆ ಕಲಿಸಿದವರು ಯಾರೋ..?

ಕೆನ್ನೆಯ ತೋಯಿಸುವ ಹನಿಗಳಿಗೆ
ನೆನಪುಗಳ ಪರಿಚಯ ಮಾಡಿಸಿದವರು ಯಾರೋ..?


ನನ್ನ ಇತಿಹಾಸದ ಪುಟದಲಿ,
ನಿನ್ನ ಮಂದಹಾಸವ ಸೇರಿಸಿದವರು ಯಾರೋ..?

ನಿನ್ನ ನುಡಿಮುತ್ತುಗಳ ಜೋಡಿಸಿ,
ಎದೆಯ ಚಿಪ್ಪಿನಲಿ ಕೂಡಿಟ್ಟವರು ಯಾರೋ..?


ಈ ಪ್ರೀತಿಯೆಂಬ ಮಾಯೆಗೆ,
ಕೊಲೆ ಮಾಡುವ ಕಲೆ, ಕಲಿಸಿದವರು ಯಾರೋ..?

ಹೃದಯದ ಮೂಲೆಯಲಿ ಅವಿಸಿಟ್ಟರು,
ಮತ್ತೆ ನಿನ್ನ ಹೆಕ್ಕಿ ತೆಗೆಯುವವರು ಯಾರೋ..?

Friday, August 16, 2013

ನಿಮ್ಮೊಲವೇ ಸಾಕ್ಷಿಯಾಗಲಿ...



ನನ್ನ ಮಾತಿಗೆ ನಿಮ್ಮ ಮೌನ ಜೊತೆಯಾಗಲಿ
ನನ್ನ ಹೃದಯಕೆ, ನಿಮ್ಮ ಮಿಡಿತ ಉಸಿರಾಗಲಿ
ಈ ಕಣ್ಣುಗಳಿಗೆ, ನಿಮ್ಮ ಕನಸು ಕೊಸರಾಗಲಿ
ಈ ಪ್ರೀತಿಗೆ, ನಿಮ್ಮ ನಗುವೇ ಸಮ್ಮತಿಯಾಗಲಿ
ನಮ್ಮಿಬ್ಬರ ಮಿಲನಕೆ, ನಿಮ್ಮೊಲವೇ ಸಾಕ್ಷಿಯಾಗಲಿ...     

Tuesday, August 6, 2013



ಮನಸೇಕೋ ಹಪಿಸಿದೆ ಇಂದು,
ಅವಳನ್ನು ಒಮ್ಮೆ ನೋಡಲೆಂದು.... 

ಕಾಡಿದೆ ಅರಿಯದ ಭಯವೊಂದು,
ನಿಲ್ಲುವುದೇನೋ ಈ ಹೃದಯ, ಆ ಕ್ಷಣವೆಂದು.... 

ಹೇಳಬೇಕಿದೆ ಅವಳಿಗೆ ಮಾತೊಂದು 
ಇಂದಿಗೂ ಈ ಹೃದಯಕೆ ಒಡತಿ, ತಾನೆಂದು... 

ಪಡೆಯಬೇಕಾಗಿದೆ ಅವಳ ಅಪ್ಪಣೆಯೊಂದು,
ಮಲಗಲು ತನ್ನ ಮಡಿಲಲಿ, ಕ್ಷಣವೊಂದು.... 

ನನ್ನ ಕೊನೆಯ ಆಸೆ ಪೂರೈಸಿದೆಯೆಂದು,
ಹೇಳುತ, ಕಣ್ಮರೆಯಾಗಬೆಕೆನಿಸಿದೆ ಇಂದು....           

ಋಝು



ನೆನಪುಗಳು ನನ್ನ ಕಾಡಿದಾಗ,
ಕಣ್ಣಿನ ಹನಿಗಳು ತನಂತಾನೆ ಜಾರಿದಾಗ,
ವಾಸ್ತವದ ಜೊತೆ ಮನಸು ಒಗ್ಗೂಡದಾಗ,
ಹೃದಯವು ತನ್ನವಳನು ಬಿಟ್ಟುಕೊಡದಾಗ,
ಉಂಟಾಗುವ ನೋವು, ನನ್ನ ಪ್ರೀತಿಗೆ 
ಋಝುವಾಗಿದೆ.......:(     

Thursday, May 16, 2013

ನನ್ನ ಪ್ರೀತಿ, ಸೇರಲಿ ನಿನ್ನಲಿ



ಬಣ್ಣದ ಪ್ರೀತಿಗೆ, ಮೌನವೆಂಬ ಮೋಡವು ಮುಸುಗಿದೆ 
ಗುಡುಗು ಮಿಂಚಾಗಿ ನಿನಗೆ ಕಾಣಲಿ,
ಕರಗಿ ಮಳೆಯಾಗಿ ಸುರಿಯಲಿ


ನಿನ್ನ ಮನದಲಿ,
ಇಬ್ಬನಿಯಾಗಿ ಸೇರಿ, ನೆನಪಾಗಿ ಕರಗಿದರು ಸರಿಯೇ 

ಅಥವಾ 
ನಿನ್ನೆದೆಯ ಚಿಪ್ಪಲಿ ಸೇರಿ, ಮುತ್ತಾಗಿ ಉಳಿದರು ಸರಿಯೇ 

ಏನೇ ಆಗಲಿ,
ಈ ನನ್ನ ಪ್ರೀತಿ, ಸೇರಲಿ ನಿನ್ನಲಿ 
ಇದ್ದುಬಿಡಲಿ,
ಕೊನೆಯ ಉಸಿರಲ್ಲೂ, ನಿನ್ನ ಜೊತೆಯಲಿ 




Friday, April 19, 2013

ನಿನ್ನ ಕೈ ಹಿಡಿದು ನಾ ಸಾಗಲೇ..?


ಬೊಟ್ಟಿರದ ಹಣೆಯಲಿ 
ಪ್ರೀತಿಯ ಚಿಹ್ನೆಯಾಗಿ 
ನನದೊಂದು ಚುಂಬನ ಬಿಟ್ಟಿರಲೆ..? 

ಕಾಮನ ಬಿಲ್ಲಲ್ಲಿ

ರಂಗಿನ ಚಿತ್ತಾರವೊಂದ 
ನಿನ್ನ ಅoಗಯ್ಯಲಿ ನಾ ಬಿಡಿಸಿಟ್ಟರಲೆ..? 

ಆ ತುಂಟ ನಗುವಲ್ಲಿ 

ಏನೋ ಅಡಗಿರುವಂತೆ 
ಕಣ್ಣಾ ಮುಚ್ಚಾಲೆ ನಾನಡಲೇ..? 

ಈ ಜೀವನ ಒಂದು 

ಎಂದೂ ಮುಗಿಯದ ಪಯಣ 
ನಿನ್ನ ಕೈ ಹಿಡಿದು ನಾ ಸಾಗಲೇ..? 


Thursday, March 28, 2013

ಪ್ರೀತಿಯಲ್ಲಿ Ph.D




Love ಅನ್ನೋ subject ನಲ್ಲಿ Ph.D ಮಾಡಿದ್ರು 
ಹೃದಯದ ನೋವಿಗೆ solution ಸಿಗಲ್ಲಿಲ್ಲ 

ಈ ಹೃದಯ Piece Piece ಆಗಿದ್ರು,
Peaceful ಆಗಿ ಅವಳನ್ನ, Love ಮಾಡೋದು ಬಿಟ್ಟಿಲ್ಲ... 

ಬಹುಷಃ ಇರಬಾರದೇ, 
ನೀ ನನ್ನ ಜೊತೆಯಲ್ಲಿ 

ನಿನಗಾಗಿ ನಿರ್ಮಿಸಿರುವೆ,
ಸ್ವರ್ಗವ ಈ ಎದೆಯಲ್ಲಿ

ಜಾಗವೇನೋ ಇರಬಹುದು,
ಸ್ವಲ್ಪ ಇರುಕು ಮುರುಕು 

ಆದರು ವಿಶ್ವದಷ್ಟು ಪ್ರೀತಿ ಅಡಗಿದೆ, 
ನಿನಗಾಗಿ, ಕೇವಲ ನಿನಗಾಗಿ..
  

Saturday, March 23, 2013

ಪ್ರೀತಿಯ ಪಯಣ




ಪ್ರೀತಿಯು ಹರಿಯುವ ನದಿಯಂತೆ 
ಹುಡುಕದಿರು ನೀ ಜಾರಿ ಹೋದ ಹೃದಯವ 

ಕೊಚ್ಚಿ ಹೋಗಿರುತ್ತದೆ,  ಪ್ರೀತಿಯ ನದಿಯಲಿ  
ಇನ್ನು ಅದರ ನಿರ್ಣಯ, ಅದೃಷ್ಟದ ಕೈಯಲಿ 

ದಡ ಸೇರಿದರೆ, ಹೊಸ ಜೀವನ 
ಇಲ್ಲವಾದರೆ, 
ನೆನಪಿನ ಜೊತೆಯಲಿ, ಪ್ರೀತಿಯ ಪಯಣ 

Friday, March 8, 2013

ವರವಾದ ಶಾಪ


ಶಪಿಸಿದೆ  ಎನ್ನ, ಈ ನನ್ನ ಹೃದಯ 
ಆಲಸ್ಯವಾಯಿತೆಂದು, ನಿನಗೆ ನನ್ನ ಪರಿಚಯ 
ನೀನೆ ಅಂತೆ, ಇನ್ನು ನನ್ನ ಜೀವನ 
ಶಾಪವಾದರು, ವರವಾಗಿ ಅನಿಸಿದೆ ಈ ಕ್ಷಣ...