ಕಡಲ ಮಡಿಲಿಗೆ
ಬಲೆಯ ಎಸೆದು
ಮೀನು ಹಿಡಿಯುವ
ಮೀನುಗಾರನ ಮಡಿಲು ಕೂಡ ಕಡಲೇ
- ಅಭಿ
Monday, July 6, 2015
ಬಯ್ದವಳೊಂದಿಗೆ ಶುರುವಾಯಿತು,
ಒಂದು ಪರಿಚಯ
ಅವಳಾಡಿದ ಪ್ರತಿ ಮಾತಿಗೂ,
ಬರೆದೆ ಒಂದು ಕವಿತೆಯ
ತುಸು ದೂರ ನಡೆದು ,
ಅವಳು ಹಿಂದುರಿಗಿ ನೋಡಿದ ಸಮಯ
ಆಗಲೇ ತಿಳಿದಿತ್ತು,
ನನ್ನ ಪ್ರೀತಿಗೆ ಜಾರಿತ್ತು ಅವಳ ಹೃದಯ
Monday, May 25, 2015
ನದಿಯ ದಡದಲಿ ಕೂತು, ಹರಿಯುವ ನೀರಿನ ಶಬ್ದ ಕೆಳುತಿದ್ದಂತೆ
ಸದ್ದು ಮಾಡುತಿದ್ದ ನನ್ನ ಭಾವನೆಗಳೆಲ್ಲ, ಒಮ್ಮೆಲೇ ಮೌನವಾಗಿತ್ತು!!!