ಹೃದಯ
ಓ ಹೃದಯವೇ ಏನಾಗಿದೆ ನಿನಗೆ
ಸ್ಪಂದನೆಯೇ ಕೊಡದೆ ಎನಗೆ
ಕೊರಗಿ ಕರಗಿ ಹೋದೆಯಾ
ಓ ಹೃದಯವೇ ಏನಾಗಿದೆ ನಿನಗೆ......
ಎಲ್ಲರಿಗೂ ಪ್ರೀತಿಯನ್ನೇ ಕೊಟ್ಟೆ
ಅವರ ನೋವನ್ನು ನಿನ್ನಲಿ ಬಚಿಟ್ಟೆ
ನನ್ನ ಪ್ರೀತಿಯಿಂದ ನೀ ಕೆಟ್ಟೆ
ಒಡೆದು ನೂರಾರು ಚೂರಾಗಿಬಿಟ್ಟೆ
ಓ ಹೃದಯವೇ ಏಕೆ ಹೀಗೆ.......
ನಿನ್ನೆದೆಯ ನೋವನ್ನು
ಮರೆತಂತೆ ನಟಿಸುವೆ ಏಕೆ
ಎಲ್ಲರ ದೃಷ್ಟಿಯಲ್ಲಿ ನೀ
ಸಂತಸದ ಸವಿಯಾದೆ ಏಕೆ
ಓ ಹೃದಯವೇ ಏಕೆ ಹೀಗೆ.......
ಓ ಹೃದಯವೇ ನಿನ್ನ ಮಾತುಗಳು
ಯಾರಿಗೂ ಕೇಳಿಸದು ಏಕೆ
ಓ ಹೃದಯವೇ ನಿನ್ನ ಬಾವನೆಗಳು
ಯಾರಿಗೂ ಅರಿಯದು ಏಕೆ
ಓ ಹೃದಯವೇ ಏಕೆ ಹೀಗೆ?..........
No comments:
Post a Comment