ಮೌನದ ಹಾದಿಯಲಿ ಒಂಟಿಯಾಗಿ ನಾ ಸಾಗುತಿರಲು,
ಜೊತೆಯಾದಳು ಅವಳು ಒಂಟಿತನವ ದೂರ ಮಾಡಲು,
ಕೈ ಹಿಡಿದು ನಡೆದಳು ಜೊತೆಜೊತೆಯಲಿ ಅವಳು,
ತಿಳಿಯದೆ ಈ ಎದೆಯಲೀ ಸ್ವಾತಿ ಮುತ್ತಾದಳು ಅವಳು.....
ಹೀಗೆ ಅನು ಕ್ಷಣ ಪ್ರತಿ ದಿನ ಸಾಗುತಿರಲು,
ನನ್ನನ್ನು ಸೆಳೆಯುತ್ತಿತ್ತು ಅವಳ ಮುಂಗುರುಳು,
ಅವಳು ನಗುವು ನನ್ನ ಮನಸೂರೆ ಮಾಡುತಿರಳು,
ಪ್ರೀತಿ ಮೂಡಿ ನನ್ನುಸಿರಾದಳು ಅವಳು.....
ತಿಳಿಯದೆ ಒಮ್ಮೆಲೇ ದೂರವಾದಳು ಅವಳು,
ಉಳಿದಿತ್ತು ನನ್ನ ಜೊತೆ ಅವಳ ಸವಿ ನೆನಪುಗಳು,
ಅವುಗಳ ಜೊತೆಯಲ್ಲಿ ಜೀವನ ಸಾಗುತಿರಲು,
ಕಣ್ಣುಗಳಲ್ಲಿ ಹನಿಯಾಗಿ ಕರಗಿತು ನನ್ನ ಕನಸುಗಳು.....
ಮನದಲ್ಲಿ ಉಳಿದಿತ್ತು ನೂರಾರು ಭಾವನೆಗಳು,
ಆ ಭಾವನೆಗಳೇ ಇಂದು ನಾ ಬರೆದ ಕವನಗಳು,
ಈ ಕವನಗಳಲ್ಲಿ ಪ್ರೀತಿಯಾಗಿ ಉಳಿದಿರುವಳು ಅವಳು,
ಅವಳಿಗಾಗಿ ಕಾಯಬಲ್ಲೆ ನಾ ನೂರು ಜನ್ಮಗಳು.....
No comments:
Post a Comment