Thursday, December 3, 2009

ಚಿಗುರೊಡೆಯಿತು....


ಮುಂಜಾನೆಯ ಮುಸುಗಿನಲ್ಲಿ
ಮೈ ಕೊರೆಯುವ ಚಳಿಯಂತೆ........
ಸೂರ್ಯನ ಎಳೆ ಬಿಸಿಲಿನಲ್ಲಿ
ಸುರಿಯುವ ಸೋನೆಯಂತೆ ........
ಬಾನಿನಂಚಲಿ ಮೂಡಿದ
ರಂಗಿನ ಚಿತ್ತಾರದಂತೆ .......
ಮಾಮರದಲಿ ಮೈ ಮರೆತು ಹಾಡುವ
ಗಾನ ಕೋಗಿಲೆಯ ಇಂಪಾದ ಹಾಡಿನಂತೆ......
ನಮ್ಮಿಬ್ಬರ ಪ್ರೀತಿ ಚಿಗುರೊಡೆಯಿತು
ಈ ನನ್ನ ಎದೆ ಚಿಪ್ಪಿನಲ್ಲಿ ಸ್ವಾತಿ ಮುತ್ತಾಗಿ ಉಳಿಯಿತು,
ಒಲವಿನ ಹೂವಾಗಿ ಅರಳಿತು.........

2 comments:

  1. ಅಭಿಲಾಶ್..
    ತುಂಬಾ ಚೆನ್ನಾಗಿದೆ.. :)

    ReplyDelete