Saturday, December 19, 2009

ಏನಾಗಲಿ ನಾನು.....?



ಕರಗುವ ಹನಿಯಾಗಿ ನಾನು
ನಿನ್ನೆದೆಯ ಚಿಪ್ಪಲ್ಲಿ ಮುತ್ತಾಗಲೇನು...?
ನೀ ನುಡಿಯುವ ಪದಗಳಾಗಿ ನಾನು
ನಿನ್ನ ಕೆಂಪಾದ ತುಟಿಗಳ ನಾ ತಾಕಲೇನು....?

ಮಿನುಗುವ ಬೆಳಕಾಗಿ ನಾನು
ನಿನ್ನ ಕಣ್ಣುಗಳಲ್ಲಿ ಸದಾ ಬೆಳಗಲೇನು...?
ನೀ ನಡೆದಾಗ ನನ್ನೆದೆ ಝಲ್ಲೆನಿಸುವ
ನಿನ್ನ ಕಾಲಿನ ಗೆಜ್ಜೆಯಾಗಲೇನು...?

ನೀನಿಡುವ ಸಿಂಧೂರವಾಗಿ ನಾನು
ನಿನ್ನ ಹಣೆಯ ಚುಂಬಿಸಲೇನು...?
ನಿನ್ನೊಲುಮೆಯ ಒಲವಾಗಿ ನಾನು
ನಿನ್ನ ಜೊತೆ ಚಿರಕಾಲ ಜೀವಿಸಲೇನು...?

ಏನಾಗಲಿ ನಾನು.....? ಏನಾಗಲಿ ನಾನು.....?

3 comments:

  1. very nice...
    i dont know its imagination or from experience..
    but i always think when we love someone .. why we will not get the same love in return :-(

    ReplyDelete
  2. Thank u Rashmi:-) even i dont have answer for that question. Think we are sailing in the same boat.....

    ReplyDelete