Saturday, May 1, 2010

ಗೆಳೆಯ


ಬೆಳದಿಂಗಳಲಿ ಕುಳಿತು ಆ ಚಂದ್ರನ ಕಂಡಾಗ
ನನ್ನ ಮನದಲ್ಲಿ ಪ್ರಶ್ನೆಯೊಂದು ಕಾಡಿದಾಗ
ಅವನನ್ನು ಕೇಳಿದೆ ಯಾರಿಗಾಗಿ ಈ ಬೆಳದಿಂಗಳೆಂದು
ಹೇಳಿದ ಅವನು, ತಾನು ಪ್ರೀತಿಸುವ ಭೂಮಿಗಾಗಿ ಎಂದು

ಮತ್ತೆ ಕೇಳಿದೆ ನಾ, ಎಷ್ಟು ದಿವಸ
ಸಿಗದ ಭೂಮಿಯ ಸುತ್ತ ತಿರುಗುವೆ ಎಂದು...?
ಮರು ಪ್ರಶ್ನೆ ಹಾಕಿದ ಅವನು, ನಾ ಎಷ್ಟು ದಿವಸ
ಸಿಗದ ಪ್ರೀತಿಗಾಗಿ ನೋವಿನಲ್ಲಿ ಕಾಯುವೆನೆಂದು...?

ಉತ್ತರ ಹೇಳಲಾಗದೆ ತಬ್ಬಿಬ್ಬಾದೆ ನಾನು
ನನ್ನ ಕಂಡು ನಗುತ ಹೇಳಿದ ಅವನು
ಇದೆ ಪ್ರೀತಿಯ ಹುಚ್ಚುತನವೆಂದು
ಈ ಹುಚ್ಚುತನವೇ ಪ್ರೀತಿಯೆಂದು.....

ನೋವಿನಲ್ಲಿಯು ನಗುತ ಬೆಳದಿಂಗಳ ಚೆಲ್ಲಿ
ಭೂಮಿಯ ಪ್ರೀತಿಸುವ ಪರಿ ಕಂಡು
ಅನಿಸಿತು ನನಗೆ ಪ್ರೀತಿಯ ಪಯಣದಲ್ಲಿ
ಎನಗೂ ಒಬ್ಬ ಸ್ನೇಹಿತ ಇರುವನೆಂದು.....

1 comment:

  1. ಕವನ ನೈಸ್.:) ಆದ್ರೆ ಬ್ಲಾಗ್ ಹಿನ್ನೆಲೆ ಹಾಗು ಅಕ್ಷರಗಳ ಬಣ್ಣ ಕಣ್ಣಿಗೆ ಸ್ವಲ್ಪ ಕಷ್ಟ ಕೊಡುತ್ತೆ..

    ReplyDelete