Monday, December 27, 2010

ಹೇಗೆ..??

ಮೌನಕೆ ಸೆರೆಯಾದ
ಮಧುರ ಮಾತುಗಳ
ಅರ್ಥ
ನಿನಗೆ ಹೇಳಲಿ ನಾ ಹೇಗೆ..??

ಎದೆಯಾಳದ ಬಡಿತದ
ಆ ಸುಂದರ ಭಾವನೆಗಳ
ನಿನಗೆ ತಿಳಿಸಲಿ ನಾ ಹೇಗೆ..??

ಕಣ್ಣುಗಳು ಕಟ್ಟಿದ
ಆ ಕನಸುಗಳ ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ ನಾ ಹೇಗೆ..??

ಮನಸಿನ ನೋವನ್ನು
ನಿನ್ನ ನೆನಪಲ್ಲಿ ಮರೆಯುತ
ನಗುತ ಮುಂದೆ ಸಾಗಲಿ ನಾ ಹೇಗೆ..??

4 comments:

  1. ಒಂದು ಬಾರಿ ಮನಸ ಪೂರ್ತಿ ...ಒಂದೇ ಒಂದು ಬಾರಿಗೆನ್ನುವಂತೆ..ಇನ್ನಿಲ್ಲವೇ ಇಲ್ಲ ಎನ್ನುವಂತೆ...ತೆರೆದು ಬಿಡಿ ನಿಮ್ಮ ಈ ಕವನದ ಒಡೆಯರ ಮುಂದೆ.. ಮುಂದೆಲ್ಲವೂ ಸುಗಮ..try ಮಾಡಿ...ಸೊಗಸಾದ ಕವನ..

    ReplyDelete
  2. ನಿಮ್ಮ ಸ್ಪಂದನೆಗೆ ಧನ್ಯವಾದಗಳು ...
    ಈ ಮಾತುಗಳು ಎಂದಿಗೂ ಹೇಳಲಾಗದು...

    ReplyDelete
  3. nija.. world is empty without the beloved one!! talalagada novendare "agalike".. ninna kavana avaligagi.. adu avalige serali... good one!!

    ReplyDelete
  4. Thanks Nammi.. Nija, ee kavana avaligaage mudipu

    ReplyDelete