Wednesday, May 21, 2014

ಓ ಮನಸೇ,
ನಿಲ್ಲದ್ದಿರು ನನ್ನೆದುರು ಪ್ರಶ್ನೆಯಾಗಿ

ಹೆಕ್ಕಿ ತೆಗೆಯದಿರು,
ಆ ನೆನಪುಗಳ, ಒಂದೊಂದಾಗಿ 

ಮಂಜು ಕಟ್ಟಿದ ಕಣ್ಣಲಿ,
ಮೂಡುವಳು ಅವಳು ಬಿಂಬವಾಗಿ

ಆ ಬಿಂಬವು ಕರಗಿ,
ಇಳಿಜಾರುವುದು ಕಂಬನಿಯಾಗಿ

ಮೂಕಾದ ಹೃದಯ,
ತೊದಲುವುದು ಬಡಿತವಾಗಿ

ಓ ಮನಸೇ... 

ಬಿಟ್ಟುಬಿಡು ಎನ್ನ,
ಇದ್ದುಬಿಡುವೆ ನಿನ್ನಿಂದ ದೂರವಾಗಿ


ಕಾಡುತಿದೆ ಎನ್ನ,
ಹೀಗೊಂದು ಹೃದಯ 

ಪ್ರೀತಿಯನು ಚೆಲ್ಲಿ,
ಮರಳು ಮಾಡುವ ಸಮಯ 

ಅರಿಯದೆ ಮೂಡಿದ ಭೀತಿಯಲಿ,
ಅಡಗಿದೆ ಒಲವಿನ ವಿಸ್ಮಯ 

ಓ ಮನಸೇ... 

ದಾಟದಿರು ಪ್ರೀತಿಯ ಕಾಲುವೆಯ 
ಆಗದಿರು ಅವಳಲಿ, ನೀ ತನ್ಮಯ

ಇದ್ದುಬಿಡು ಹೇಗೇ...  

ಇರುವನು ನಿನ್ನ ಜೊತೆಯಲಿ
ಚಂದಿರನೆಂಬ ಗೆಳೆಯ