Wednesday, May 21, 2014



ಕಾಡುತಿದೆ ಎನ್ನ,
ಹೀಗೊಂದು ಹೃದಯ 

ಪ್ರೀತಿಯನು ಚೆಲ್ಲಿ,
ಮರಳು ಮಾಡುವ ಸಮಯ 

ಅರಿಯದೆ ಮೂಡಿದ ಭೀತಿಯಲಿ,
ಅಡಗಿದೆ ಒಲವಿನ ವಿಸ್ಮಯ 

ಓ ಮನಸೇ... 

ದಾಟದಿರು ಪ್ರೀತಿಯ ಕಾಲುವೆಯ 
ಆಗದಿರು ಅವಳಲಿ, ನೀ ತನ್ಮಯ

ಇದ್ದುಬಿಡು ಹೇಗೇ...  

ಇರುವನು ನಿನ್ನ ಜೊತೆಯಲಿ
ಚಂದಿರನೆಂಬ ಗೆಳೆಯ

1 comment:

  1. ಒಬ್ಬ ನೊಂದ ಪ್ರೇಮಿ ಮತೊಮ್ಮೆ ಎಡವಬಾರದೆಂಬ ಸಂದೇಶ ಈ ಕವನದಲ್ಲಿದೆ ಕವಿವರ್ಯ :-)

    ReplyDelete