Wednesday, May 21, 2014

ಓ ಮನಸೇ,
ನಿಲ್ಲದ್ದಿರು ನನ್ನೆದುರು ಪ್ರಶ್ನೆಯಾಗಿ

ಹೆಕ್ಕಿ ತೆಗೆಯದಿರು,
ಆ ನೆನಪುಗಳ, ಒಂದೊಂದಾಗಿ 

ಮಂಜು ಕಟ್ಟಿದ ಕಣ್ಣಲಿ,
ಮೂಡುವಳು ಅವಳು ಬಿಂಬವಾಗಿ

ಆ ಬಿಂಬವು ಕರಗಿ,
ಇಳಿಜಾರುವುದು ಕಂಬನಿಯಾಗಿ

ಮೂಕಾದ ಹೃದಯ,
ತೊದಲುವುದು ಬಡಿತವಾಗಿ

ಓ ಮನಸೇ... 

ಬಿಟ್ಟುಬಿಡು ಎನ್ನ,
ಇದ್ದುಬಿಡುವೆ ನಿನ್ನಿಂದ ದೂರವಾಗಿ

1 comment:

  1. ಬಿಟ್ಟೂ ಬಿಡದ ಭಾವನೆಗಳ ಉಲ್ಲೇಖನ, ಚೆನ್ನಾಗಿದೆ!

    ReplyDelete