ನನ್ನ ಮಾತಿಗೆ ನಿಮ್ಮ ಮೌನ ಜೊತೆಯಾಗಲಿ ನನ್ನ ಹೃದಯಕೆ, ನಿಮ್ಮ ಮಿಡಿತ ಉಸಿರಾಗಲಿ ಈ ಕಣ್ಣುಗಳಿಗೆ, ನಿಮ್ಮ ಕನಸು ಕೊಸರಾಗಲಿ ಈ ಪ್ರೀತಿಗೆ, ನಿಮ್ಮ ನಗುವೇ ಸಮ್ಮತಿಯಾಗಲಿ ನಮ್ಮಿಬ್ಬರ ಮಿಲನಕೆ, ನಿಮ್ಮೊಲವೇ ಸಾಕ್ಷಿಯಾಗಲಿ...
Tuesday, August 6, 2013
ಮನಸೇಕೋ ಹಪಿಸಿದೆ ಇಂದು, ಅವಳನ್ನು ಒಮ್ಮೆ ನೋಡಲೆಂದು.... ಕಾಡಿದೆ ಅರಿಯದ ಭಯವೊಂದು, ನಿಲ್ಲುವುದೇನೋ ಈ ಹೃದಯ, ಆ ಕ್ಷಣವೆಂದು.... ಹೇಳಬೇಕಿದೆ ಅವಳಿಗೆ ಮಾತೊಂದು ಇಂದಿಗೂ ಈ ಹೃದಯಕೆ ಒಡತಿ, ತಾನೆಂದು... ಪಡೆಯಬೇಕಾಗಿದೆ ಅವಳ ಅಪ್ಪಣೆಯೊಂದು, ಮಲಗಲು ತನ್ನ ಮಡಿಲಲಿ, ಕ್ಷಣವೊಂದು.... ನನ್ನ ಕೊನೆಯ ಆಸೆ ಪೂರೈಸಿದೆಯೆಂದು, ಹೇಳುತ, ಕಣ್ಮರೆಯಾಗಬೆಕೆನಿಸಿದೆ ಇಂದು....
ಬಣ್ಣದ ಪ್ರೀತಿಗೆ, ಮೌನವೆಂಬ ಮೋಡವು ಮುಸುಗಿದೆ ಗುಡುಗು ಮಿಂಚಾಗಿ ನಿನಗೆ ಕಾಣಲಿ, ಕರಗಿ ಮಳೆಯಾಗಿ ಸುರಿಯಲಿ ನಿನ್ನ ಮನದಲಿ, ಇಬ್ಬನಿಯಾಗಿ ಸೇರಿ, ನೆನಪಾಗಿ ಕರಗಿದರು ಸರಿಯೇ ಅಥವಾ ನಿನ್ನೆದೆಯ ಚಿಪ್ಪಲಿ ಸೇರಿ, ಮುತ್ತಾಗಿ ಉಳಿದರು ಸರಿಯೇ ಏನೇ ಆಗಲಿ, ಈ ನನ್ನ ಪ್ರೀತಿ, ಸೇರಲಿ ನಿನ್ನಲಿ ಇದ್ದುಬಿಡಲಿ, ಕೊನೆಯ ಉಸಿರಲ್ಲೂ, ನಿನ್ನ ಜೊತೆಯಲಿ
ಬೊಟ್ಟಿರದ ಹಣೆಯಲಿ ಪ್ರೀತಿಯ ಚಿಹ್ನೆಯಾಗಿ ನನದೊಂದು ಚುಂಬನ ಬಿಟ್ಟಿರಲೆ..? ಕಾಮನ ಬಿಲ್ಲಲ್ಲಿ ರಂಗಿನ ಚಿತ್ತಾರವೊಂದ ನಿನ್ನ ಅoಗಯ್ಯಲಿ ನಾ ಬಿಡಿಸಿಟ್ಟರಲೆ..? ಆ ತುಂಟ ನಗುವಲ್ಲಿ ಏನೋ ಅಡಗಿರುವಂತೆ ಕಣ್ಣಾ ಮುಚ್ಚಾಲೆ ನಾನಡಲೇ..? ಈ ಜೀವನ ಒಂದು ಎಂದೂ ಮುಗಿಯದ ಪಯಣ ನಿನ್ನ ಕೈ ಹಿಡಿದು ನಾ ಸಾಗಲೇ..?
Love ಅನ್ನೋ subject ನಲ್ಲಿ Ph.D ಮಾಡಿದ್ರು ಹೃದಯದ ನೋವಿಗೆ solution ಸಿಗಲ್ಲಿಲ್ಲ ಈ ಹೃದಯ Piece Piece ಆಗಿದ್ರು, Peaceful ಆಗಿ ಅವಳನ್ನ, Love ಮಾಡೋದು ಬಿಟ್ಟಿಲ್ಲ... ಬಹುಷಃ ಇರಬಾರದೇ, ನೀ ನನ್ನ ಜೊತೆಯಲ್ಲಿ ನಿನಗಾಗಿ ನಿರ್ಮಿಸಿರುವೆ, ಸ್ವರ್ಗವ ಈ ಎದೆಯಲ್ಲಿ ಜಾಗವೇನೋ ಇರಬಹುದು, ಸ್ವಲ್ಪ ಇರುಕು ಮುರುಕು ಆದರು ವಿಶ್ವದಷ್ಟು ಪ್ರೀತಿ ಅಡಗಿದೆ, ನಿನಗಾಗಿ, ಕೇವಲ ನಿನಗಾಗಿ..
ಪ್ರೀತಿಯು ಹರಿಯುವ ನದಿಯಂತೆ ಹುಡುಕದಿರು ನೀ ಜಾರಿ ಹೋದ ಹೃದಯವ ಕೊಚ್ಚಿ ಹೋಗಿರುತ್ತದೆ, ಪ್ರೀತಿಯ ನದಿಯಲಿ ಇನ್ನು ಅದರ ನಿರ್ಣಯ, ಅದೃಷ್ಟದ ಕೈಯಲಿ ದಡ ಸೇರಿದರೆ, ಹೊಸ ಜೀವನ ಇಲ್ಲವಾದರೆ, ನೆನಪಿನ ಜೊತೆಯಲಿ, ಪ್ರೀತಿಯ ಪಯಣ