Friday, March 12, 2010

ಕಾಯುತಿರುವೆ ನಿನಗಾಗಿ......


ಸಿಗದ ಪ್ರೀತಿಯ ಕಡೆಗೆ
ಸಾಗುತಿದೆ ನನ್ನೊಲವಿನ ಪಯಣ....
ಮರೆಯಲಾಗದ ಆ ಕ್ಷಣಗಳಿಗೆ
ಸೋತಿದೆ ನನ್ನ ಈ ಮನ....


ಸುತ್ತಲು ಸುಳಿಯುವ ನೆನಪುಗಳಿಗೆ
ಶರಣಾಗಿದೆ ನನ್ನ ಒಂಟಿತನ....
ನೀ ಬಿಟ್ಟು ಹೋದ ಕನಸುಗಳಿಗೆ
ಅರ್ಪಿಥವಾಗಿದೆ ನನ್ನ ಈ ನಯನ....


ನೀ ದೂರಾದ ಹಾದಿಯಲ್ಲಿ
ಮೌನದಿ ಸಾಗಿದೆ ಜೀವನ....
ನೀ ಬರುವ ದಾರಿಯ
ಕಾಯುತ ಕುಳಿತಿದೆ ಈ ಪ್ರಾಣ....

2 comments:

  1. ಚೆನ್ನಾಗಿದೆ ಕವನ
    ತಡಕಾಡುತ್ತಿರುವ ಪ್ರೀತಿಗೆ ಹುಡುಕಾಡುತ್ತಿರುವ ಮನಸು
    ಸುಂದರ ಭಾವನೆಗಳು

    ReplyDelete