Friday, October 28, 2011

ಸಾಗಿರುವೆ ನಾನು....




ಮೊದಲನೇ ಬಾರಿಗೆ 
ಹೃದಯದ ಊರಿಗೆ 
ಪ್ರೀತಿಯ ಪಲಕ್ಕಿ ಹೊತ್ತು
ಸಾಗಿರುವೆ ನಾನು....

ಮನಸಿನ ಮೌನಕೆ 
ಮಾತನು ಪೋಣಿಸಿ 
ಎದೆಯ ವೀಣೆ ನುಡಿಸಿ 
ಹಾಡುತ ಸಾಗಿರುವೆ ನಾನು 

ಒಲವಿನ ಕಣ್ಣಿಗೆ 
ಕನಸುಗಳ ಜೋಡಿಸಿ 
ಬಯಕೆಗಳ ಜೊತೆಯಲಿ 
ಆಸೆಯಿಂದ ಸಾಗಿರುವೆ ನಾನು 

ಹೃದಯ ಬಾಗಿಲ ತೆಗೆದು 
ಮನಸಿನ ಮೌನವ ಮುರಿದು 
ಒಲವಿನ ಕಣ್ಣನು ತೆರೆದು 
ಆಹ್ವಾನಿಸುವೆಯಾ ಎನ್ನ ನೀನು
ಓ ನನ್ನ ನಲ್ಲೆ..... 

Wednesday, October 26, 2011

ಢವ ಢವ....


ಢವ ಢವ ಒಡೆಯುವ
ಈ ನನ್ನ ಹೃದಯಕೆ
ಸುಮ್ಮನೆ ಇರು ಎಂದು
ನೀ ಹೇಳಬಾರದೆ....

ಎಲ್ಲೆಲ್ಲೂ ನಿನ್ನನೆ
ಹುಡುಕುವ ಕಣ್ಣಿಗೆ
ರೆಪ್ಪೆಯ ಮುಚ್ಚಿಕೋ ಎಂದು
ಕನಸಾಗಿ ಬರಬಾರದೇ...

ನಿನ್ನಯ ನಗುವನು
ಮನದಲ್ಲಿ ಚೆಲ್ಲುತ
ಚಾಚಿ ಹಿಡಿದ ಕೈಯ್ಯನು
ಹಿಡಿದು ಹೆಜ್ಜೆ ಹಾಕಬಾರದೆ...

ಸನಿಹಕೆ ಸುಳಿಯುತ
ಪ್ರೀತಿಯ ಅಪ್ಪುಗೆಯಲಿ
ತೆರೆದಿಟ್ಟ ಎದೆಯೊಳಗೆ
ನಿನ್ನ ಹೆಸರನೆ ಕೆತ್ತಬಾರದೆ....

ನಿನ್ನಯ ಕಣ್ಣನೆ ನೋಡುತ
ಕಲ್ಲಾಗಿ ನಿಂತ ನನ್ನನು
ಅದೇ ಮೋಡಿಯಲಿ ನೋಡುತ
ನಿನಲ್ಲಿ ಬಂಧಿಸಬಾರದೆ....

Tuesday, October 25, 2011

ಓ ಪ್ರೀತಿ.....


ಓ ಪ್ರೀತಿ ಓ ಪ್ರೀತಿ
ಎನ್ನ ಬಳಿ ನೀ  ಬಾರದಿರು
ಕಣ್ಣಲ್ಲೂ ಮನಸಲ್ಲೂ
ಎಲ್ಲೂ ನೀ ಹುಟ್ಟದಿರು....

ಮೌನದಲಿ ಮಾತಾಗಿ
ಎನ್ನ ನೀ ಕಾಡದಿರು
ಎದೆಯಲ್ಲಿ ಉಸಿರಾಗಿ
ಎನ್ನೊಳಗೆ ನೀ ಸೇರದಿರು....

ಮರಳಿ ಪ್ರೀತಿಯ ಹಂಚಿ
ಮನಸು ಮೂಕಗಿದೆಯೇ
ಹೃದಯ ಚೂರಾದಮೇಲು
ಎದೆ ಬಿರಿಯೋ ನೋವಿದೆಯೇ....

ಬೇಡ ಎನಗೆ ನಿನ್ನೊಲವು
ಬದುಕುವೆ ನಾ ಕಲ್ಲಾಗಿ
ಸಾಕು ಇನ್ನು ಈ ಭಾವನೆಗಳು
ತಲ್ಲುವೆ ಜೀವನ ಬಂಡಿಯ, ಶಿಲೆಯಾಗಿ....

ಇಷ್ಟೆಲ್ಲಾ ಆದರು ಓ ಪ್ರೀತಿ
ಏಕೆ ನಿನಗೆ ಮರಳಿ ಬರುವ ಯತ್ನ
ಹೋಗಿಬಿಡು ಬಲು ದೂರ
ಕೊಲ್ಲದಿರು ಎನ್ನ ಹೀಗೆ ಅನುಕ್ಷಣ....

Wednesday, October 19, 2011

Every day, every moment....



Every day, there are
thousand words to speak
hundred dreams to share
but, only one reason to care

Every moment,
Listen to my heart,
It tells a story in style
And spreads love with a smile

Every second,
When you are not with me
I feel, I am lost
And wander like a ghost

Every time,
When I try to say
All the things I feel for you
You never let me do…