ಓ ಪ್ರೀತಿ ಓ ಪ್ರೀತಿ
ಎನ್ನ ಬಳಿ ನೀ ಬಾರದಿರು
ಕಣ್ಣಲ್ಲೂ ಮನಸಲ್ಲೂ
ಎಲ್ಲೂ ನೀ ಹುಟ್ಟದಿರು....
ಮೌನದಲಿ ಮಾತಾಗಿ
ಎನ್ನ ನೀ ಕಾಡದಿರು
ಎದೆಯಲ್ಲಿ ಉಸಿರಾಗಿ
ಎನ್ನೊಳಗೆ ನೀ ಸೇರದಿರು....
ಮರಳಿ ಪ್ರೀತಿಯ ಹಂಚಿ
ಮನಸು ಮೂಕಗಿದೆಯೇ
ಹೃದಯ ಚೂರಾದಮೇಲು
ಎದೆ ಬಿರಿಯೋ ನೋವಿದೆಯೇ....
ಬೇಡ ಎನಗೆ ನಿನ್ನೊಲವು
ಬದುಕುವೆ ನಾ ಕಲ್ಲಾಗಿ
ಸಾಕು ಇನ್ನು ಈ ಭಾವನೆಗಳು
ತಲ್ಲುವೆ ಜೀವನ ಬಂಡಿಯ, ಶಿಲೆಯಾಗಿ....
ಇಷ್ಟೆಲ್ಲಾ ಆದರು ಓ ಪ್ರೀತಿ
ಏಕೆ ನಿನಗೆ ಮರಳಿ ಬರುವ ಯತ್ನ
ಹೋಗಿಬಿಡು ಬಲು ದೂರ
ಕೊಲ್ಲದಿರು ಎನ್ನ ಹೀಗೆ ಅನುಕ್ಷಣ....
ಎನೊ ಇದು, ಇಷ್ಟು ಬೆಜಾರ್ ಆಗಿದಿಯಾ???
ReplyDeleteನಿನ್ನ ಅರ್ಥ ಮಾದಿಕೊಲ್ಲದವರು, ಪ್ರಪ೦ಚದಲ್ಲಿ ಯಾರನ್ನು ಅರ್ಥ ಮಾಡಿಕೊಳಲ್ಲ ಕನೊ... ನೀನು ಅಷ್ಟು ಪ್ರೀತಿ ಕೊಡ್ತೀಯ..
ನಾನು ನಿನಗೆ ಹೆಳೋ ಅಷ್ಟು ದೊಡ್ಡವಳಲ್ಲ, ಅನ್ದ್ ನನಗೆ ಗೊತ್ತು u can come out of this ಅ೦ತ....
Kavana as usual super... as always u r expressive....
-Pooja
howdu kane.. too much disappointed.. as u said i will come out of it...
ReplyDeleteಅಭಿ..ಪ್ರೀತಿಲಿ ನೋವು,ದುಃಖಗಳು ಸಹಜ ತಾನೇ?
ReplyDeleteಲವ್ವಲ್ಲಿ ಕಣ್ಣಿರು ಕಂಪಲ್ಸರಿ...ಅಂತ ಭಟ್ಟರು ಹೇಳಿದ್ನ ಒಮ್ಮೆ ನೆನಪು ಮಾಡಿಕ್ಕೋಳ್ಳಿ..
ಕವನದ ತುಂಬಾ ಪ್ರೀತಿಗಾಗಿ ಹಪಾಹಪಿ ಇದ್ದಂತೆ ಕಂಡು ಬಂದರೂ..., ಅದ್ಯಾಕೆ ಪ್ರೀತಿನ ಬಾರದಿರು ಅಂತ ದೂರ ತಳ್ಳುತ್ತ ಇದ್ದಿರಾ ಅಂತಾ ಗೋತ್ತಗಲಿಲ್ಲ...
ಚೆನ್ನಾಗಿ ಬರೆದ್ದಿದ್ದಿರಿ..Gud one..
Thank u Mounaraaga...
ReplyDeleteಲವ್ವಲ್ಲಿ ನೊವು ಸಹಜ ಆದರೆ ಆ ಪ್ರೀತಿನೆ ನೊವಾದರೆ...??
adakke ee kavana...:)
ಅಭಿ, ಹೃದಯದ ಸಂಗಡ ನೋವು ಸಹ ಉಚಿತವಿದೆ....!!
ReplyDeleteಸಾಂಗ್ ನೆನಪಿದೆಯಾ.....?
ನಿರಾಸರಾಗಬೇಡಿ....
all is wel...
ಹಾ ನೆನಪಿದೆ....
ReplyDeleteyes, Hoping for that....