ಢವ ಢವ ಒಡೆಯುವ
ಈ ನನ್ನ ಹೃದಯಕೆ
ಸುಮ್ಮನೆ ಇರು ಎಂದು
ನೀ ಹೇಳಬಾರದೆ....
ಎಲ್ಲೆಲ್ಲೂ ನಿನ್ನನೆ
ಹುಡುಕುವ ಕಣ್ಣಿಗೆ
ರೆಪ್ಪೆಯ ಮುಚ್ಚಿಕೋ ಎಂದು
ಕನಸಾಗಿ ಬರಬಾರದೇ...
ನಿನ್ನಯ ನಗುವನು
ಮನದಲ್ಲಿ ಚೆಲ್ಲುತ
ಚಾಚಿ ಹಿಡಿದ ಕೈಯ್ಯನು
ಹಿಡಿದು ಹೆಜ್ಜೆ ಹಾಕಬಾರದೆ...
ಸನಿಹಕೆ ಸುಳಿಯುತ
ಪ್ರೀತಿಯ ಅಪ್ಪುಗೆಯಲಿ
ತೆರೆದಿಟ್ಟ ಎದೆಯೊಳಗೆ
ನಿನ್ನ ಹೆಸರನೆ ಕೆತ್ತಬಾರದೆ....
ನಿನ್ನಯ ಕಣ್ಣನೆ ನೋಡುತ
ಕಲ್ಲಾಗಿ ನಿಂತ ನನ್ನನು
ಅದೇ ಮೋಡಿಯಲಿ ನೋಡುತ
ನಿನಲ್ಲಿ ಬಂಧಿಸಬಾರದೆ....
ಚಂದದ ಹೋಲಿಕೆ..ಕಲ್ಪನೆಗಳು....
ReplyDeleteNice ಅಭಿ...
Thank u very much Mounaraaga.... Nim hesaru gottagalilla...
ReplyDeleteHey very good kano... best of the lot i read... beautiful feelings..:)
ReplyDelete-Pooja
Abhilash...
ReplyDeleteIm sushma...