Monday, November 7, 2011

ದೂರಾಗಬೇಕು ನಾ ನಿನ್ನಿ೦ದ....



ದೂರಾಗಬೇಕು ನಾ ನಿನ್ನಿ೦ದ
ನಿನ್ನ ಮೇಲಿಟ್ಟ ಪ್ರೀತಿಯಿ೦ದ
ದೂರಾಗಬೇಕು ಈ ನೆನಪುಗಳಿ೦ದ
ನೆನಪುಗಳು ತರುವ ನೋವಿನಿ೦ದ

ದೂರಾಗಬೇಕು ಈ ಭಾವನೆಗಳಿ೦ದ
ಈ ಭಾವನೆಗಳು ಮೂಡಿಸುವ ಆಸೆಯಿ೦ದ
ದೂರಾಗಬೇಕು ನಿನ್ನ ಕನಸುಗಳಿ೦ದ
ಕನಸುಗಳು ಬ೦ದಾಗ ಬರುವ ಕಣ್ಣೀರಿನಿ೦ದ

ದೂರವಾಗಿ ಉಳಿಯಲು ನಾ ನಿನ್ನಿ೦ದ
ದೂರಾಗಬೇಕು ಈ ಹೃದಯದಿ೦ದ
ಹೃದಯದಲ್ಲಿರುವ ಪ್ರೀತಿಯಿ೦ದ
ಆ ಪ್ರೀತಿಗಾಗಿ ಕಾಯುತಿರುವ ನನ್ನಿ೦ದ...

7 comments:

  1. ಅಭಿ...ಕವನ ಹಾಗೆ ಮನ ತಟ್ಟಿ ಬಿಡುತ್ತೆ...
    ದೂರಾಗುವಲ್ಲಿ ಇರೋ ಸೆಳೆತವೇ ಅಂತದ್ದು....

    ಮರೆಯುವುದು ಆಗದೆ ಇತ್ತು ಅಂದಾಗ ಮೂಡುವುದೇ ಆ ಕೊನೆಯ ಸಾಲುಗಳು...

    ಬಿಡೆಂದರೂ ಬಿಡದೀ ಮಾಯೆ..

    ಪ್ರೀತಿ ಮಾಯೆ ಹುಷಾರು.....

    ಅಲ್ವ ಮತ್ತೆ?!
    ಕವನ ಚೆನ್ನಾಗಿ ಮೂಡಿ ಬಂದಿದೆ ಅಭಿ...

    ReplyDelete
  2. Thank u very much...:)

    ಹೌದು ಸುಷ್ಮಾ. ನೀವು ಹೇಳಿದ್ದು ನಿಜ. ಪ್ರೀತಿ ಅನ್ನೊದು ಮಾಯೆ. ನಮ್ಮಿ೦ದ ನಮ್ಮನ್ನೆ ದೂರ ಮಾಡುವ ಮಾಯೆ. ಸಿಕ್ಕರೆ ಸ್ವರ್ಗ ಇಲ್ಲವಾದರೆ ನರಕಕ್ಕಿ೦ತ ಕಡೆ....

    ಆದರು ಆ ನೊವಿನಲ್ಲು, ಸವಿ ನೆನಪುಗಳ ಜೊತೆಯಲಿ ಸಾಗುವುದೆ ಜೀವನ....:)

    ReplyDelete
  3. ಅಭಿಲಾಶ್ ಭಾವಾರ್ಥ ಚನ್ನಾಗಿದೆ...ಕವನವಾಗಿ ಹರಿದಿರುವುದೂ ಇಷ್ಟವಾಯಿತು.

    ReplyDelete
  4. Thank u very much, Jalanayana...:)

    ReplyDelete
  5. I don't have words kano...Simple and heart touching... very sad to be in such situations...:(:(

    -Pooja

    ReplyDelete
  6. hai anna nemma kavana tumba chennagede

    ReplyDelete