
ಕಡಲಾಳದಲಿರುವ ಚಿಪ್ಪಲಿ
ಸ್ವಾತಿ ಮುತ್ತಾಗುವ ಆಸೆ....
ಸುರಿಯುವ ಸೋನೆಗೆ
ಹೂವಿನೆದೆಯ ಮೇಲೆ
ಇಬ್ಬನಿಯಾಗಿ ಕರಗುವ ಆಸೆ....
ತಿರುಗುವ ಭೂಮಿಗೆ
ಹುಣ್ಣಿಮೆಯ ರಾತ್ರಿಯಲಿ
ಚಂದ್ರನ ಬೆಳದಿಂಗಳ ಸವಿಯೋ ಆಸೆ....
ಹಾಡುವ ಕೋಗಿಲೆಗೆ
ಮಾಘಮಾಸದಲಿ
ಮಾಮರದಲಿ ಕೂತು ಕೂಗುವ ಆಸೆ....
ಪ್ರೀತಿಸುವ ಎನಗೆ
ನಿನೆದೆಯ ಅಂತರಾಳದಲಿ
ಒಲವಾಗಿ, ಚಿರಕಾಲ ಉಳಿಯುವ ಆಸೆ....