
ನಿನ್ನನು ನೋಡಲು
ಮನದಲಿ ಅರಿಯದ ಕಳವಳ,
ಎದುರಿಗೆ ಬರಲು ನೀ
ಎದೆಯಲಿ ತಿಳಿಯದ ತಳಮಳ....
ಕಣ್ಣಿನ ಅಂಚಲೇ
ನನ್ನನು ಸೆಳೆಯುವೆ ಏತಕೆ..?
ನಗುವನು ಚೆಲ್ಲುತ
ಬರೆದಿರುವೆಯಾ ಪ್ರೀತಿಯ ಶೀರ್ಷಿಕೆ...?
ಮೌನದ ಭಾಷೆಯ
ಹೇಗೆ ತಿಳಿಸಲಿ ಈ ದಿನ,
ನಿನ್ನಯ ನೆನಪಿನ
ತುಂತುರು ಮನದಲಿ ಅನುಕ್ಷಣ....
ತುಟಿಗಳ ನಡುವಲಿ
ನನ್ನ ಹೆಸರನೆ ಕೂಗುತ
ಬರುವೆಯ ಜೊತೆಯಲಿ
ಕೊನೆವರೆಗೂ ಪ್ರೀತಿಯ ಹಂಚುತ....
ನಿನ್ನನು ನೋಡಲು....
Oye, ninage ellinda sigute padagalu. superbbbbbb kano. last 2 para antoo tumba chennagide...ಬರುವೆಯ ಜೊತೆಯಲಿ ಕೊನೆವರೆಗೂ ಪ್ರೀತಿಯ ಹಂಚುತ... Whoever comes, I am sure they love you till the end. Bcoz, that's the type of love you give them... Speechless...Keep t up and try writing more. I just love to see your post.
ReplyDeletePooja
Thanks kane....
ReplyDeleteI agree with your friend!!!
ReplyDelete