ಈ ಕ್ಷಣ ಈ ಮನ ನೆನೆದಿದೆ ನಿನ್ನನೆ....
ಈ ಕ್ಷಣ ಈ ಮನ
ನೆನೆದಿದೆ ನಿನ್ನನೆ,
ಕರಗಿದ ಕ್ಷಣಗಳ ನೆನೆಯುತ
ಕೂತಿರುವೆ ಸುಮ್ಮನೆ....
ಕಾಡುತಿದೆ ಈ ಮೌನ
ಮೌನದಲು ನಿನ್ನದೇ ಧ್ಯಾನ,
ಕಣ್ಣ ಮುಚ್ಚಿ ತೆರೆದರು
ಕಾಣುವೆ ನೀನು ಮುನ್ನ ....
ಸುಮ್ಮನೆ ಜಾರಿ ಬರುವ
ಕಂಬನಿಯ ತಡಿಯಲಿ ಹೇಗೆ,
ನನ್ನಲಿ ಬೆರೆತಿರುವ ನಿನ್ನ
ಮರೆಯಲಿ ನಾ ಹೇಗೆ ....
ತಪ್ಪು ಯಾರದು ಅಲ್ಲ
ಆದರೆ ಶಿಕ್ಷೆ ಎನಗೇಕೆ,
ಮನಸು ಸಾಯುತಿದ್ದರು
ಸಾಗುತಿರುವ ಈ ಜೀವನ ಎನಗೇಕೆ....
ಈ ಕ್ಷಣ ಈ ಮನ
ನೆನೆದಿದೆ ನಿನ್ನನೆ.............
sundara kavana
ReplyDeletephotovoo sundara
oye.. whom u r remembering..huh..;);)ಈ ಕ್ಷಣ ಈ ಮನ
ReplyDeleteನೆನೆದಿದೆ ನಿನ್ನನೆ...........nice kano...
-Pooja
yaararavalu ninna dhyanadalli irovalu?
ReplyDelete