Tuesday, May 31, 2011

ಆಸೆ..

ಮುಗಿಲಲಿ ಕರಗುವ ಹನಿಗೆ
ಕಡಲಾಳದಲಿರುವ ಚಿಪ್ಪಲಿ
ಸ್ವಾತಿ ಮುತ್ತಾಗುವ ಆಸೆ....

ಸುರಿಯುವ ಸೋನೆಗೆ
ಹೂವಿನೆದೆಯ ಮೇಲೆ
ಇಬ್ಬನಿಯಾಗಿ ಕರಗುವ ಆಸೆ....

ತಿರುಗುವ ಭೂಮಿಗೆ
ಹುಣ್ಣಿಮೆಯ ರಾತ್ರಿಯಲಿ
ಚಂದ್ರನ ಬೆಳದಿಂಗಳ ಸವಿಯೋ ಆಸೆ....

ಹಾಡುವ ಕೋಗಿಲೆಗೆ
ಮಾಘಮಾಸದಲಿ
ಮಾಮರದಲಿ ಕೂತು ಕೂಗುವ ಆಸೆ....

ಪ್ರೀತಿಸುವ ಎನಗೆ
ನಿನೆದೆಯ ಅಂತರಾಳದಲಿ
ಒಲವಾಗಿ, ಚಿರಕಾಲ ಉಳಿಯುವ ಆಸೆ....

2 comments:

  1. wah wah!! ninna aase ella pooraisali endu harasuve!! good one as usual :-)

    ReplyDelete
  2. ಕೆಲವು ಆಸೆಗಳು ಆಸೆಗಳಾಗೆ ಉಳಿಯುತ್ತೆ ಅಲ್ವಾ . ಚಂದ್ರ ಮಾತ್ರ ಭೂಮಿನ ಬೆಳದಿಂಗಳು ಚೆಲ್ಲಿ ಪ್ರೀತಿಸ್ತಾನೆ ಅಂತ ಗೊತ್ತಿತು ಆದರೆ ಭೂಮಿ ಕೂಡ ಆ ಪ್ರೀತಿಗಾಗಿ ಕಾಯುತ್ತೆ ಅಂತ ee ಕವನದಿಂದ ಗೊತ್ತಾಯಿತು ಕಣೋ. ಅದಕೆ ಹೇಳೋದು ಅನಿಸುತೆ .... ರವಿ ಕಾಣದ್ದನ್ನ ಕವಿ ಕಂಡ ಅಂತ... very creative.... :):):)

    -Pooja

    ReplyDelete