ನನ್ನ ಹಾಡು.
ನೂರು ಪದಗಳ ಮಿಲನ,
ನನ್ನ ಮನಸು
ಸಾವಿರ ಭಾವನೆಗಳ ಕದನ,
ನನ್ನ ಪ್ರೀತಿ,
ನೂರು ಜನ್ಮದ ಪಯಣ,
ನನ್ನ ಬಾಳು
ಸಾವಿರ ಕನಸು ಕಾಣುವ ನಯನ..........
ನಾನ ನೆನಪು,
ಅವಳು ಬಿಟ್ಟು ಹೋದ ಹೆಜ್ಜೆ ಗುರುತು,
ನನ್ನ ಹೃದಯ,
ಅವಳು ಹೊಡೆದು ಹೋದ ಕನ್ನಡಿ,
ನನ್ನ ಮೌನ,
ಅವಳು ಕಳಿಸಿ ಕೊಟ್ಟ ಮಾತು.
ನನ್ನ ನಗು,
ಅವಳು ಉಳಿಸಿ ಹೋದ ನೋವು
ನನ್ನ ನೇತ್ರ
ಅವಳಿಗಾಗಿ ಕಾಯುತಿರುವ ಕನಸು,
ನನ್ನ ಕಥೆ,
ಅವಳ ನನ್ನ ಪ್ರೀತಿಯ ಚರಿತೆ
ನನ್ನ ಜೀವ,
ಅವಳು ಹಚ್ಚಿ ಹೋದ ಹಣತೆ,
ನನ್ನ ಉಸಿರು,
ನಾ ಪ್ರೆತಿಸುವವಳ ಮುದ್ದಾದ ಹೆಸರು........
No comments:
Post a Comment