ಮುಗಿಲ ಮೇಲೆ ಮನೆಯ ಮಾಡಿ,
ಪ್ರೀತಿಯ ಹನಿಗಳನ್ನು ಅದರಾಲಿ ಕೂಡಿತ್ತು,
ಮನಸಿನ ಭಾವನೆಗಳ ಅದರ ಜೊತೆಯಿಟ್ಟು
ಜೀವದ ಬಾಗಿಲ ಸರಿಸಿ,
ಮೌನದ ಬೀಗವ ಹಾಕಿ,
ಕನಸಿನ ಕೋಟೆಯನ್ನು ಅದರ ಸುತ್ತಲು ಕಟ್ಟಿ
ಈ ನನ್ನ ಹೃದಯದಲ್ಲಿ ಬಚಿಟ್ಟು,
ನಿನಗಾಗಿ ಕಾದಿರುವೆ ಓ ಒಲವೆ ...............
ಮಿಂಚಾಗಿ ನೀ ಕನಸಿನ ಕೋಟೆಗೆ ಬರಲು,
ಹೃದಯ ತಂತಿಯ ನೀ ಮೇಟುತಿರಲು,
ನಿನ್ನ ನಗುವು ಮೌನದ ಬೀಗವ ಮುರಿಯಲು,
ನಿನ್ನ ನೋಟ ಜೀವದ ಬಾಗಿಲ ತೆರೆಯಲು,
ಭಾವನೆಗಳ ಅಲೆಗಳು ನಿನ್ನ ಹೃದಯವ ಮೀಟಲು,
ಪ್ರೀತಿಯ ಹನಿಗಳು ನಿನ್ನ ಮೇಲೆ ಚಿಮ್ಮುತಿರಲು,
ಸಿಗುವ ಆ ಮುದ ನಿನದಾಗಲಿ,
ಅದನ್ನು ಸವಿಯುವ ಅದೃಷ್ಟ ಎನದಾಗಲಿ..............
No comments:
Post a Comment