Thursday, December 30, 2010

Missing You...


You came into my life
gave the meaning to my heart beat
I was like a hard rock
you made me as soft as flower

Filled my gloomy eyes
with so many desires and dreams
Made me to smile
with your words and gestures

You showed me the taste of caring
made me to fall in love with you
You was with me, holding my hand
in every smile and sorrow

Unfortunately, you was never mine
yet, why do I feel for you again and again
Time came when you became someone's
yet, you have been remembered again

Whether it is friendship, or it is love
but I miss you even now
I Can't wish, you to be mine
but, I have to live with pain

This feeling towards you never ends
my broken heart never mends
look at my eyes, when my life ends
still you can see the love that never ends...

Monday, December 27, 2010

ಹೇಗೆ..??

ಮೌನಕೆ ಸೆರೆಯಾದ
ಮಧುರ ಮಾತುಗಳ
ಅರ್ಥ
ನಿನಗೆ ಹೇಳಲಿ ನಾ ಹೇಗೆ..??

ಎದೆಯಾಳದ ಬಡಿತದ
ಆ ಸುಂದರ ಭಾವನೆಗಳ
ನಿನಗೆ ತಿಳಿಸಲಿ ನಾ ಹೇಗೆ..??

ಕಣ್ಣುಗಳು ಕಟ್ಟಿದ
ಆ ಕನಸುಗಳ ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ ನಾ ಹೇಗೆ..??

ಮನಸಿನ ನೋವನ್ನು
ನಿನ್ನ ನೆನಪಲ್ಲಿ ಮರೆಯುತ
ನಗುತ ಮುಂದೆ ಸಾಗಲಿ ನಾ ಹೇಗೆ..??

Monday, December 20, 2010

ನಗುವೇ ಸಾಕು....


ಆ ನಗುವೇ ಸಾಕು
ಅವಳ ಅಂದ ಹೊಗಳೋಕೆ,
ಅವಳ ಮಾತು ಸಾಕು
ಸುಂದರ ಕವಿತೆ ಬರೆಯೋಕೆ....

ಅವಳ ಕಣ್ಣೋಟವೇ ಸಾಕು
ಎಲ್ಲರ ಮನಸೂರೆ ಮಾಡೋಕೆ,
ಅವಳ ಸ್ಪರ್ಶವೊಂದು ಸಾಕು
ಹೂವಿನ ಮೊಗ್ಗು ಅರಳೋಕೆ....

ಅವಳು ಸನಿಹ ಇದ್ದರೆ ಸಾಕು
ಈ ಹೃದಯ ಮಿಡಿಯೋಕೆ,
ಅವಳು ಜೊತೆಯಾದರೆ ಸಾಕು
ಈ ಜೀವನ ಕಳೆಯೋಕೆ....

Friday, December 3, 2010

ಪ್ರೀತಿ ಸಾವನ್ನು ಸಿಹಿ ಮಾಡುವುದು.........

ಹೇಳಲಿ ಹೇಗೆ ನಾನು
ಮೌನದ ಈ ಮಾತನ್ನು
ತೋರಿಸಲಿ ಹೇಗೆ ನಾನು
ಮನದಾಳದ ಪ್ರೀತಿಯನ್ನು....

ನೋಡು ಒಮ್ಮೆ ಈ ಕಣ್ಣನ್ನು
ಕಂಬನಿಯಲಿ ಬೆರೆತಿರುವೆ ನೀನು
ಕೇಳು ನನ್ನೆದೆಯ ಬಡಿತವನ್ನು
ಮೆಲ್ಲನೆ ಜಪಿಸಿದೆ ನಿನ್ನ ಹೆಸರನ್ನು....

ನನ್ನ ನರ ನಾಡಿಯಲಿ ಬೆರೆತಿರುವೆ ನೀನು
ನಿನ್ನ ಅಗಲಿ ಬದುಕಲಿ ಹೇಗೆ ನಾನು....
ಕೊಂದುಬಿಡು ಒಮ್ಮೆ ನೀ ನನ್ನನ್ನು
ಕೊಟ್ಟುಬಿಡು ಎನಗೆ, ನಿನ್ನ ಮಡಿಲನ್ನು....

ನಗುತ ಸವಿಯುವೆ ಸಾವನ್ನು
ನಿನ್ನ ನೋಡುತಲೇ ಬಿಡುವೆ ಕೊನೆಯ ಉಸಿರನ್ನು ....

Monday, November 8, 2010

ಏಕೆ...?





ಪ್ರೀತಿಯೇ
ಅರಿಯದೆ ನೀ ಮೂಡುವೇ ಏಕೆ...?
ಸಿಗದ ಒಲವಿನ ಕಡೆಗೆ
ಜಾರುವುದು ಈ ಮನಸೇಕೆ...?

ಸರಿ ತಪ್ಪುಗಳ ನಡುವೆ
ನರಳುವ ಆಸೆ ನಿನಗೇಕೆ...?
ಹೃದಯ ಹಿಂಡುವ
ಈ ಹುಚ್ಚು ಭಾವನೆಗಳು ನಿನಗೇಕೆ...?

ನಮ್ಮಿಬ್ಬರ ಗೆಳೆತನ
ಪ್ರೀತಿಯಾಗಬಾರದೇಕೆ...?
ನನ್ನ ಗೆಳತಿ
ನನ್ನವಳಾಗಬಾರದೇಕೆ...?

ಅವಳ ಉಸಿರು
ನಾನಾಗಬಾರದೇಕೆ...?
ಉತ್ತರ ತಿಳಿದರು
ಪ್ರಶ್ನೆಗಳು ಕಾಡುವುದು ಹೀಗೇಕೆ...?

ಅವಳನ್ನು ಪಡೆಯುವ
ಸಿಹಿಗನಸು ನಿನಗೇಕೆ...?
ಕನಸೆಂದು ಅರಿತು
ಜಾರಿ ಬರುವ ಕಂಬನಿ ನಿನಗೇಕೆ...?

ಮತ್ತೆ ಮತ್ತೆ ಸುಳಿಯುವ
ಆ ನೆನಪುಗಳು ನಿನಗೇಕೆ...?
ಕನಸುಗಳಿಗೆ ಹೆದರಿ
ರಾತ್ರಿ ಇಡೀ ಅಲೆಯುವ ಒಂಟಿತನ ನಿನಗೇಕೆ...?

Wednesday, October 6, 2010

Darkness


Is the darkness, a gift of god..???
Is the darkness, a curse from god...???

It is within us to decide because,
from darkness is where our life starts.,
And, in darkness is where our life ends.,
In between we see the colors of light called life.

When we win something
we see the light of Glory.,
When we lose something
we see the darkness of failure.,

All the relations, smiles, tears,
love, glory, memories and pain
will fade with the darkness of time.,
when everything ends, Its the darkness again....

We wait for the darkness to embrace us,
and there the so called life ends......
Is the darkness, a gift of god...???
Is the darkness, a curse from god...???

Sunday, July 11, 2010

ಇರುವೆ ಜೊತೆಯಾಗಿ


ನೂರು ಜನುಮವಾದರು
ನಾ ಕಾಯುವೆ ನಿನಗಾಗಿ
ನೂರು ಬಾರಿಯಾದರೂ
ಹುಟ್ಟಿಬರುವೆ ನಿನ್ನ ಪ್ರೀತಿಗಾಗಿ.....

ನೀ ಎಲ್ಲೇ ಹೋದರು
ಬರುವೆ ನಿನ್ನ ಹಿಂದೆ ನೆರಳಾಗಿ
ಸುಳಿಯುವೆ ನಿನ್ನ ಸುತ್ತಲು
ನಾ ತಂಗಾಳಿಯಾಗಿ.....

ನೀ ಕತ್ತಲಲ್ಲಿದರೆ
ಬರುವೆ ನಾ ಬೆಳದಿಂಗಳಾಗಿ
ಮಿನುಗುವೆ ನಿನ್ನ ಕಣ್ಣಲಿ
ನಾ ನಕ್ಷತ್ರವಾಗಿ.....

ಕೈ ಹಿಡಿದು ನಡೆಸುವೆ
ನಿನ್ನ ಬಾಳ ಸಂಗಾತಿಯಾಗಿ
ಚಿತೆಯಲು ಬರುವೆ
ನಾ ನಿನ್ನ ಜೊತೆಯಾಗಿ.....

Sunday, June 27, 2010

ಪ್ರೀತಿ ಹುಟ್ಟಿದ ಸಮಯ.....


ಒಲವೇ ನಿನ್ನ ಚೆಲುವ ಚೆಲ್ಲಿ
ದೋಚಿದೆ ನನ್ನ ಹೃದಯ....
ದೋಚಿದ ಹೃದಯದಲಿ ನೀ
ಸುರಿಸಿದೆ ಪ್ರೀತಿಯ ಮಳೆಯ....

ನಿನ್ನ ನೋಟದಲಿ ಅಡಗಿತ್ತು
ಅರಿಯದ ಮೂಕ ವಿಸ್ಮಯ....
ಆ ಕಣ್ಣಿನ ನೋಟಕೆ ಸಿಲುಕಿ
ನನ್ನ ಮನವಾಯಿತು ತನ್ಮಯ....

ಮರು ಕ್ಷಣದಲೇ ನನಗಾಯಿತು
ನಿನ್ನ ಹೃದಯದ ಪರಿಚಯ....
ನಮಿಬ್ಬರ ಮದ್ಯೆ ನಡೆದಿತ್ತು
ಸ್ನೇಹ ಪ್ರೀತಿಯ ಪರಿಣಯ....

ನಮ್ಮಿಬ್ಬರ ಭಾವನೆಗಳು
ಒಂದಾಗಿ ಸೇರಿದ ಸಮಯ....
ತಿಳಿಸಿದೆ ನಾನು ನಿನಗೆ
ನನ್ನಂತರಾಳದ ಪ್ರೀತಿಯ....

Sunday, June 20, 2010

ಮರೆಯಾಗುವ ಬಾ.....


ಕರಗುವ ಹನಿಗಳ ಜೊತೆಯಲಿ
ಕುಣಿಯುವ ಬಾ ಮಳೆಯಲಿ.....
ಸುರಿಯುವ ಮುಂಜಾನೆ ಮಂಜಲಿ
ಬಚ್ಚಿಡುವೆ ನಿನ್ನ ಈ ಎದೆಯಲಿ.....

ಪ್ರೀತಿಯ ಅಲೆಗಳ ಮಡಿಲಲಿ
ತೇಲುವ ಬಾ ನೆನಪಿನ ದೋಣಿಯಲಿ.....
ಹೃದಯ ಬರೆದ ಕವಿತೆಯಲಿ
ಮರೆಯಾಗುವ ಬಾ ಸವಿಗನಸಲಿ.....

Saturday, May 1, 2010

ಗೆಳೆಯ


ಬೆಳದಿಂಗಳಲಿ ಕುಳಿತು ಆ ಚಂದ್ರನ ಕಂಡಾಗ
ನನ್ನ ಮನದಲ್ಲಿ ಪ್ರಶ್ನೆಯೊಂದು ಕಾಡಿದಾಗ
ಅವನನ್ನು ಕೇಳಿದೆ ಯಾರಿಗಾಗಿ ಈ ಬೆಳದಿಂಗಳೆಂದು
ಹೇಳಿದ ಅವನು, ತಾನು ಪ್ರೀತಿಸುವ ಭೂಮಿಗಾಗಿ ಎಂದು

ಮತ್ತೆ ಕೇಳಿದೆ ನಾ, ಎಷ್ಟು ದಿವಸ
ಸಿಗದ ಭೂಮಿಯ ಸುತ್ತ ತಿರುಗುವೆ ಎಂದು...?
ಮರು ಪ್ರಶ್ನೆ ಹಾಕಿದ ಅವನು, ನಾ ಎಷ್ಟು ದಿವಸ
ಸಿಗದ ಪ್ರೀತಿಗಾಗಿ ನೋವಿನಲ್ಲಿ ಕಾಯುವೆನೆಂದು...?

ಉತ್ತರ ಹೇಳಲಾಗದೆ ತಬ್ಬಿಬ್ಬಾದೆ ನಾನು
ನನ್ನ ಕಂಡು ನಗುತ ಹೇಳಿದ ಅವನು
ಇದೆ ಪ್ರೀತಿಯ ಹುಚ್ಚುತನವೆಂದು
ಈ ಹುಚ್ಚುತನವೇ ಪ್ರೀತಿಯೆಂದು.....

ನೋವಿನಲ್ಲಿಯು ನಗುತ ಬೆಳದಿಂಗಳ ಚೆಲ್ಲಿ
ಭೂಮಿಯ ಪ್ರೀತಿಸುವ ಪರಿ ಕಂಡು
ಅನಿಸಿತು ನನಗೆ ಪ್ರೀತಿಯ ಪಯಣದಲ್ಲಿ
ಎನಗೂ ಒಬ್ಬ ಸ್ನೇಹಿತ ಇರುವನೆಂದು.....

Tuesday, March 23, 2010

ಪ್ರೀತಿ


ಮನದಾಳದ ಮಾತಿಗೆ,
ಹೃದಯದಾಳದ ಬಡಿತವಾಗಿ,
ಉದಯಿಸಿತು ಈ ಪ್ರೀತಿ.....

ಅವಳ ಕಣ್ಣೋಟಕೆ ಸಿಲುಕಿ,
ಕನಸಿನ ಲೋಕದಲಿ ಅಲೆದಾಗ,
ಎದುರಾದ ಮಧುರ ಕನಸು ಈ ಪ್ರೀತಿ.....

ಅವಳ ಅಂದಕೆ ಶರಣಾಗಿ,
ನನ್ನ ಮಾತೆಲ್ಲ ಮೌನವಾದಾಗ,
ಮೂಡಿದ ಸವಿ ಭಾವ ಈ ಪ್ರೀತಿ.....

ಅವಳ ತುಂಟ ನಗುವಿನಲ್ಲಿ,
ನಾ ಮರೆಯಾದ ಕ್ಷಣಗಳ ನೆನೆಯುತ,
ಮುಂದೆ ಸಾಗುವ ಪರಿಯೇ ಈ ಪ್ರೀತಿ.....

Friday, March 12, 2010

ಕಾಯುತಿರುವೆ ನಿನಗಾಗಿ......


ಸಿಗದ ಪ್ರೀತಿಯ ಕಡೆಗೆ
ಸಾಗುತಿದೆ ನನ್ನೊಲವಿನ ಪಯಣ....
ಮರೆಯಲಾಗದ ಆ ಕ್ಷಣಗಳಿಗೆ
ಸೋತಿದೆ ನನ್ನ ಈ ಮನ....


ಸುತ್ತಲು ಸುಳಿಯುವ ನೆನಪುಗಳಿಗೆ
ಶರಣಾಗಿದೆ ನನ್ನ ಒಂಟಿತನ....
ನೀ ಬಿಟ್ಟು ಹೋದ ಕನಸುಗಳಿಗೆ
ಅರ್ಪಿಥವಾಗಿದೆ ನನ್ನ ಈ ನಯನ....


ನೀ ದೂರಾದ ಹಾದಿಯಲ್ಲಿ
ಮೌನದಿ ಸಾಗಿದೆ ಜೀವನ....
ನೀ ಬರುವ ದಾರಿಯ
ಕಾಯುತ ಕುಳಿತಿದೆ ಈ ಪ್ರಾಣ....

Sunday, February 28, 2010

प्यार होगया है ..


प्यार होगया था हमे उनसे
उनकी खूबसूरत चेहरा से
उनकी काली काली जुल्फों से
उनकी झील सी आँखों से ॥


प्यार होगया था हमे उनसे
उनकी मीठी आवाज़ से
उनकी हस्ते हुए होठों से
उनकी हर अदाओं से ॥


प्यार करते करते ही रह गए,
जब उनको बताना चाह
तो चले गए थे वो
हमे अकेला छोडके ॥


अब प्यार हो गया है हमे
उनकी हर यादों से
उनके साथ बीते हुए
हर एक लम्हों से ॥

Sunday, February 14, 2010

ಹೃದಯ ಮಿಡಿತ

ಈ ಹೃದಯದ ಮಿಡಿತವು
ಮೌನ ಕವಿತೆಯಾಗಿ ಹೊರಬರಲು.....

ನನ್ನಲಿ ಅಡಗಿರುವ ಪ್ರೀತಿಯು
ಮಕರಂದವಾಗಿ ಹೊಮ್ಮುತಿರಲು.....

ಚಂದಿರ ಚೆಲ್ಲಿದ ಬೆಳದಿಂಗಳಲಿ
ನಿನ್ನ ನೆನಪುಗಳು ಕಮಲವಾಗಿ ಅರಳುತಿರಲು.....

ರೋಮಾಂಚನಗೊಂಡ ಈ ಮನಸಿನ
ಒಡನಾಟಕೆ ನೀ ಜೊತೆಯಿರಲು.....

ನಿನ್ನ ಪ್ರೀತಿಯ ಲೋಕದಲ್ಲಿ ಮರೆಯಾದೆ ನಾನು
ನನ್ನೆದೆಯ ಅರಮನೆಗೆ ರಾಣಿಯಾಗಿ ಉಳಿದೆ ನೀನು....


Happy Valentines Day..............:-)
ಮನಸು ಮೌನವಾಗಿದೆ
ಮಾತು ಮರೆತುಹೋಗಿದೆ.....
ನಿನ್ನ ಸುಂದರ ನೆನಪುಗಳಲ್ಲಿ
ಮನಸು ಮುಳುಗಿ ಹೋಗಿದೆ.....

ಕಣ್ಣುಗಳು ನಿನ್ನ ನೋಡಲು
ಕಂಬನಿಯಲ್ಲಿ ನಿನಗಾಗಿ ಕಾದಿದೆ.....
ಉಸಿರು ನಿನ್ನ ಹೆಸರು ಕೂಗಲು
ಉಸಿರು ಹಿಡಿದಿಟ್ಟು ಕಾದಿದೆ.....

ನಿನ್ನ ಕನಸನ್ನು ಕಾಣುವ ಕಣ್ಣಿಗೆ
ಕಂಬನಿಯನ್ನೇಕೆ ನೀ ಕೊಟ್ಟೆ.....?
ನಿನ್ನನೆ ಪ್ರೀತಿಸಿದ ಈ ಹೃದಯಕೆ
ನೋವನ್ನೇಕೆ ನೀ ಇಟ್ಟೆ.....?

ಒಮ್ಮೆಯಾದರೂ ನೀ ಬರುವೆ ಎಂದು
ಸಣ್ಣ ಆಸೆಯೊಂದು ಮೂಡಿದೆ.....
ಆ ಆಸೆಗೆ ಜೀವ ತುಂಬಿ
ಮನಸು ಹೃದಯ ನಿನಗಾಗಿ ಕಾದಿದೆ.....

Sunday, February 7, 2010

ನಿನ್ನ ಸನಿಹ


ನನ್ನ ಸನಿಹ ನೀನು ಬರಲು
ನನ್ನ ಮಾತು ಮೌನವಾಯಿತು,
ನಿನ್ನ ಕಣ್ಣ ನೋಡುತಿರಲು
ನನ್ನ ಕಲ್ಪನೆಯೇ ಕರಗಿಹೋಯಿತು.....

ನಿನ್ನ ನಗುವ ಕಂಡ ಕ್ಷಣವು
ನನ್ನ ಮನವು ನಿನ್ನದಾಯಿತು,
ನಿನ್ನ ಅಂದ ಹೊಗಳಲು ಚಂದ
ಪದಗಳೇಕೋ ಸಾಲದೇ ಹೋಯಿತು.....

ಒಂದು ಬಾರಿ ನನ್ನ ಸೇರಿ
ಹೃದಯ ಮಿಡಿತವ ಕೇಳು ಬಾರೆ,
ನನ್ನ ಮೌನ ಗೀತೆಯಲ್ಲಿ
ಪದಗಳಾಗಿ ಬೆರೆಯ ಬಾರೆ.....

ಹೇಳು ನೀನು ಒಂದು ಮಾತು
ನೀನೆ ನನ್ನ ಪ್ರೀತಿಯೆಂದು,
ನನ್ನ ಹೃದಯ ಬರೆದುಕೊಟ್ಟು
ನಿನ್ನ ಸನಿಹ ಇರುವೆ ನಾ ಎಂದೆಂದೂ.....

Will be with you forever and ever and ever.....

Sunday, January 31, 2010

ನೆನಪು......


ನೆನಪಾಗುವುದು ನಿನ್ನ ಸವಿ ಸ್ಪರ್ಶ
ಈ ತಂಗಾಳಿ ಸೋಕಿದಾಗ.....
ನೆನಪಾಗುವುದು ನಿನ್ನ ಕಣ್ಣುಗಳು
ಆ ಚುಕ್ಕಿಗಳ ನಾ ನೋಡಿದಾಗ.....


ನೆನಪಾಗುವುದು ನಿನ್ನ ನಗುವು
ಅರಳುವ ಹೂವನ್ನು ನೋಡಿದಾಗ.....
ನೆನಪಾಗುವುದು ನಿನ್ನ ತುಂಟ ತನ
ಪುಟ್ಟ ಮಗುವನ್ನು ನೋಡಿದಾಗ.....

ನೆನಪಾಗುವದು ಆ ಕ್ಷಣಗಳು
ಪ್ರತಿಸಾರಿ ಈ ಹೃದಯ ಮಿಡಿದಾಗ.....
ಜೊತೆಯಾಗುವುದು ನಿನ್ನ ನೆನಪುಗಳು
ಒಂಟಿಯಾಗಿ ಜೀವನದಲ್ಲಿ ನಾ ಸಾಗುವಾಗ.....